See also 2thrust
1thrust ತ್ರಸ್ಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ಅದೇ).
  1. ತಿವಿ; ಚುಚ್ಚು (ರೂಪಕವಾಗಿ ಸಹ): thrust his fist into my face ಅವನು ತನ್ನ ಮುಷ್ಟಿಯಿಂದ ನನ್ನ ಮುಖಕ್ಕೆ ತಿವಿದ.
  2. ತುರುಕು; ಬಲವಂತದಿಂದ ಒಳತಳ್ಳು: thrust the letter into his pocket ಕಾಗದವನ್ನು ತನ್ನ ಜೇಬಿಗೆ ತುರುಕಿದ. thrust a pin into the cushion ಮೆತ್ತೆಯೊಳಕ್ಕೆ ಒಂದು ಸೂಜಿ ಚುಚ್ಚಿದ.
  3. ಚಾಚು; ಪ್ರಸರಿಸು: I thrust out my hand ನನ್ನ ಕೈಯನ್ನು ಚಾಚಿದೆ.
  4. ಬಲವಂತವಾಗಿ ಹೇರು; ಒತ್ತಾಯದಿಂದ ಹೊರಿಸು, ಒಪ್ಪಿಕೊಳ್ಳುವಂತೆ ಮಾಡು: some have greatness thrust upon them ಕೆಲವರ ಮೇಲೆ ಮಹತ್ತ್ವ ಹೇರಲಾಗಿರುತ್ತದೆ.
  5. ತಳ್ಳು; ನೂಕು; ದಬಉ; ಒತ್ತು; ಒತ್ತರಿಸು: was thrust from his rights ಅವನ ಹಕ್ಕುಗಳು ಸಿಗದಂತೆ ಹೊರದಬ್ಬಲ್ಪಟ್ಟ. my objections were thrust aside ನನ್ನ ಆಕ್ಷೇಪಗಳನ್ನು ಬದಿಗೊತ್ತಲಾಯಿತು.
  6. (ವ್ಯಕ್ತಿ ಮೊದಲಾದವರನ್ನು) ಇರಿ; ತಿವಿ.
  7. ನುಗ್ಗಿಕೊಂಡು ಹೋಗು; ತಳ್ಳಿಕೊಂಡು–ಮುಂದೆ ಹೋಗು, ಮುಂದುವರಿ.
ಅಕರ್ಮಕ ಕ್ರಿಯಾಪದ
  1. (ಬಾಕು ಮೊದಲಾದವುಗಳಿಂದ ವ್ಯಕ್ತಿ ಮೊದಲಾದವರನ್ನು) ಇರಿ; ತಿವಿ.
    1. ಥಟ್ಟನೆ ಮುನ್ನುಗ್ಗು.
    2. ನುಗ್ಗು; ತಳ್ಳಿಕೊಂಡು ಹೋಗು.
ಪದಗುಚ್ಛ

thrust oneself (or one’s nose) in ಇನ್ನೊಬ್ಬರ ವಿಷಯದಲ್ಲಿ ಮಧ್ಯೆ ಪ್ರವೇಶಿಸು, ನಡುವೆ ತಲೆಹಾಕು, ಮೂಗು ತೂರಿಸು.

See also 1thrust
2thrust ತ್ರಸ್ಟ್‍
ನಾಮವಾಚಕ
    1. ನೂಕಲು; ನುಗ್ಗಲು.
    2. ಮುನ್ನುಗ್ಗು(ವುದು).
    3. ದೂಡುವುದು.
  1. ನೋದನ–ಬಲ, ಶಕ್ತಿ; ಚಾಲಕ ದಂಡ, ಕ್ಷಿಪಣಿ, ಎಂಜಿನ್ನು, ಮೊದಲಾದವುಗಳು ಮುಂದೆ ಚಲಿಸುವಂತೆ ಮಾಡುವ–ತಳ್ಳಿಕೆ, ದೂಡಿಕೆ, ಒತ್ತಡ.
  2. (ಶತ್ರುಸೈನ್ಯ ಯಾ ಪ್ರದೇಶದ ಮೇಲೆ) ನುಗ್ಗುದಾಳಿ; ಅವುಗಳ ಒಳಹೊಗಲು ಮಾಡುವ ಪ್ರಬಲ ಪ್ರಯತ್ನ.
  3. (ಆಯುಧದಿಂದ) ಇರಿತ; ತಿವಿತ.
  4. (ವಿಮರ್ಶೆ, ಟೀಕೆ, ಮೊದಲಾದವುಗಳ) ಮುಖ್ಯಾಂಶ; ಪ್ರಧಾನ ವಸ್ತು.
  5. (ಒಬ್ಬನನ್ನು ಕುರಿತ) ಟೀಕೆ; ಇರಿನುಡಿ.
  6. (ಎರಡು ಕಾಯಗಳ, ಮುಖ್ಯವಾಗಿ ಒಂದು ಕಟ್ಟಡದ ಕಮಾನು, ತೊಲೆ ತೀರು, ಮೊದಲಾದ ಭಾಗಗಳ ಮೇಲಿನ ಪರಸ್ಪರ) ಒತ್ತಡ; ಒತ್ತಾಟ; ತುಯ್ತ; ದಬಾವಣೆ.
  7. ಇರಿತ; ತಿವಿತ; ಆಯುಧದ ತುದಿಯಿಂದ ಚುಚ್ಚುವುದು, ತಿವಿಯುವುದು.
  8. = thrust fault.