threaten ತ್ರೆ(ಟ್‍)ನ್‍
ಸಕರ್ಮಕ ಕ್ರಿಯಾಪದ
  1. ಬೆದರಿಸು; ಹೆದರಿಸು; ಬೆದರಿಕೆ ಹಾಕು; ಭಯವುಂಟುಮಾಡು: threatened me with death ನನ್ನನ್ನು ಸಾಯಿಸಿಬಿಡುವುದಾಗಿ ಬೆದರಿಕೆ ಹಾಕಿದ.
  2. (ಮುಂದೆ ಸಂಭವಿಸಬಹುದಾದ) ಕೇಡನ್ನು ಸೂಚಿಸು; ಕೇಡು, ಅಪಾಯ, ಮೊದಲಾದವುಗಳ ಬಗ್ಗೆ ಎಚ್ಚರಿಕೆ ಕೊಡು: threatens to resign ರಾಜೀನಾಮೆ ಕೊಡುವುದಾಗಿ ಬೆದರಿಸುತ್ತಾನೆ. threatens every kind of torment ಎಲ್ಲಾ ರೀತಿಯ ಚಿತ್ರಹಿಂಸೆ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ.
  3. (ರೂಪಕವಾಗಿ) ಮುಂದಾಗುವ (ಅಹಿತಕರ ಮೊದಲಾದ) ಘಟನೆಗಳ ಬಗ್ಗೆ ಎಚ್ಚರಿಕೆ (ಸೂಚನೆ) ಕೊಡು: clouds threaten to interrupt us ಮಳೆಯ ಮೋಡಗಳು ನಮಗೆ ಅಡ್ಡಬರುವ ಹೆದರಿಕೆ ಇದೆ.