See also 2thread
1thread ತ್ರೆಡ್‍
ನಾಮವಾಚಕ
  1. (ಹತ್ತಿ, ರೇಷ್ಮೆ, ಗಾಜು, ಮೊದಲಾದವುಗಳ ನೂತ, ಹೊಸೆದ) ಎಳೆ; ನೂಲು; ತಂತು; ದಾರ.
  2. ದಾರದ ತುಂಡು.
  3. (ಬಹುವಚನದಲ್ಲಿ) ಬಟ್ಟೆಬರೆ; ವಸ್ತ್ರಗಳು.
  4. ಸಣ್ಣ ಹುರಿ; ಮುಖ್ಯವಾಗಿ ಹೊಲಿಯಲು ಯಾ ನೇಯಲು ಬಳಸುವ ತಿರುಚಿದ ಎಳೆಗಳ ತೆಳುವಾದ ಹುರಿ.
  5. ತಿರುಪಿನ ಸುತ್ತು.
  6. (ಅದುರಿನ) ಎಳೆ; ಗೆರೆ.
  7. ತಂತು; ಎಳೆ; ದಾರದಂತೆ ತೆಳ್ಳಗೆ, ಉದ್ದವಾಗಿ, ಅವಿಚ್ಫಿನ್ನವಾಗಿ ಇದೆಯೆಂದು ಭಾವಿಸಲ್ಪಟ್ಟ ಯಾವುದೇ ವಸ್ತು: the thread of life ಜೀವನ ತಂತು; ಬಾಳ ನೂಲು; ಜೀವನ ಗತಿ.
ಪದಗುಚ್ಛ
  1. gather up the threads ( ವಿಷಯ ವಿಭಾಗಗಳನ್ನು ಬೇರೆಬೇರೆಯಾಗಿ ನಿರೂಪಿಸಿದ ಮೇಲೆ) ಪರಸ್ಪರ ಸಂಬಂಧ ಕಲ್ಪಿಸು, ಒಟ್ಟೈಸು; (ವಿಷಯದ) ಎಳೆಗಳನ್ನು ಒಟ್ಟುಗೂಡಿಸಿಕೊ.
  2. gold thread ಜರಿ; ಚಿನ್ನದ ಸರಿಗೆ.
  3. hang by a thread
    1. (ವ್ಯಕ್ತಿಯ ಪ್ರಾಣ ಮೊದಲಾದವು) ಅಪಾಯಸ್ಥಿತಿಯಲ್ಲಿರು; ಸೂಕ್ಷ್ಮವಾಗಿ ಅಂಟಿಕೊಂಡಿರು.
    2. (ಅನಿಶ್ಚಿತ ಸ್ಥಿತಿಯಲ್ಲಿನ ಗಂಭೀರ ಸಮಸ್ಯೆ) ಎಳೆಯಷ್ಟು ಅಂತರದಲ್ಲಿ ತೂಗಾಡುತ್ತಿರು.
  4. has not a dry thread on him ಅವನು ಪೂರ್ತ ತೊಯ್ದು ಹೋಗಿದ್ದಾನೆ, ಒದ್ದೆಮುದ್ದೆಯಾಗಿದ್ದಾನೆ.
  5. lose the thread of an argument ವಾದದ ಸರಣಿಸಂಬಂಧ ತಪ್ಪು.
  6. resume (or take up) the thread of ಅಡ್ಡಿಯಿಂದ ನಿಂತುಹೋಗಿರುವುದನ್ನು ಮತ್ತೆ ಮುಂದುವರಿಸು.
See also 1thread
2thread ತ್ರೆಡ್‍
ಸಕರ್ಮಕ ಕ್ರಿಯಾಪದ
  1. ಸೂಜಿಗೆ ದಾರ ಪೋಣಿಸು.
  2. (ಛಾಯಾಚಿತ್ರದ ಹಿಲ್ಮ್‍, ಧ್ವನಿಮುದ್ರಣದ ಕಾಂತಟೇಪು, ಮೊದಲಾದವುಗಳ ವಿಷಯದಲ್ಲಿ) ಕ್ಯಾಮರಾ, ಟೇಪ್‍ ರಿಕಾರ್ಡರ್‍, ಮೊದಲಾದವುಗಳೊಳಗೆ ಅಳವಡಿಸು, ಸುರುಳಿ ಯಾ ಪಟ್ಟಿಯ ಆಕಾರದಲ್ಲಿ ತುಂಬಉ.
  3. ದಾರದಲ್ಲಿ (ಮಣಿ ಮೊದಲಾದವನ್ನು) ಪೋಣಿಸು, ಪೋಣಿಸಿ–ಹಾರವನ್ನಾಗಿ ಮಾಡು, ಸರ ಕಟ್ಟು.
  4. (ದಾರದಲ್ಲಿ ಮಣಿ ಪೋಣಿಸುವಂತೆ) ರಸ್ತೆ, ಅಂಕುಡೊಂಕು ದಾರಿ, ಜನಜಂಗುಳಿ, ಮೊದಲಾದವುಗಳ ನಡುವೆ–ದಾರಿ ಮಾಡಿಕೊಂಡು ಹೋಗು, ನುಸುಳುತ್ತಾ ಸಾಗು
  5. (ಕೂದಲನ್ನು) ದಾರದಂತೆ ನಡುವೆ–ಸೇರಿಸು, ಹೆಣೆ: tawny hair threaded with silver ಬಿಳಿಗೂದಲು ಸೇರಿಕೊಂಡ ಕಂದುಗೂದಲು.
  6. (ಮೊಳೆಗೆ) ತಿರುಪು ಮಾಡು; ತಿರುಪಿನ ಗೆರೆ ಬಿಡಿಸು.