See also 2thrash
1thrash ತ್ರಾಷ್‍
ಸಕರ್ಮಕ ಕ್ರಿಯಾಪದ
  1. = thresh\((1)\).
  2. (ಕೋಲು, ಚಾವಟಿ, ಮೊದಲಾದವುಗಳಿಂದ) ಚೆಚ್ಚು; ತೀಡು; ಹೊಡೆ; ಬಾರಿಸು.
  3. (ರೂಪಕವಾಗಿ) (ಸ್ಪರ್ಧೆಯಲ್ಲಿ) ಬಗ್ಗು ಬಡಿ; ಸೋಲಿಸು; ಸದೆ ಬಡಿ.
ಅಕರ್ಮಕ ಕ್ರಿಯಾಪದ
  1. (ಹಡಗಿನ ಹುಟ್ಟುಗಾಲಿ, ಮರದ ಕೊಂಬೆ, ಮೊದಲಾದವುಗಳ ವಿಷಯದಲ್ಲಿ, ಒಕ್ಕುಗೋಲಿನಂತೆ ಮೇಲಿಂದ ಮೇಲೆ) ಬಡಿ; ಬಡಿದಾಡು.
  2. (ಹಡಗು)
    1. ಅಲೆಗೆ ಬಡಿಯುತ್ತಿರು.
    2. ಗಾಳಿಗೆ ಯಾ ಭರತಕ್ಕೆ ಎದುರಾಗಿ ಹೋಗು.
    3. ನೀರಿನಲ್ಲಿ ಅತ್ತಿತ್ತ ಪ್ರಬಲವಾಗಿ ಚಲಿಸು, ಹೊಯ್ದಾಡು.
  3. (ಬಿರುಸಾಗಿ ಯಾ ಗಾಬರಿಯಿಂದ) ಕೈಕಾಲುಗಳನ್ನು –ಬಡಿ, ಒದರು, ಜಾಡಿಸು.
ಪದಗುಚ್ಛ
  1. thrash out ಪುನಃ ಪುನಃ ಚರ್ಚಿಸು; ಕೂಲಂಕಷವಾಗಿ–ವಿಚಾರಮಾಡು, ವಿಮರ್ಶೆ ಮಾಡು; ತಳಸ್ಪರ್ಶಿಯಾಗಿ ಚರ್ಚೆ ನಡೆಸು.
  2. thrash to windward ಗಾಳಿಗೆ ಎದುರು ಹೋಗು
See also 1thrash
2thrash ತ್ರಾಷ್‍
ನಾಮವಾಚಕ
  1. (ಚಾವಟಿ ಮೊದಲಾದವುಗಳಿಂದ) ಚೆಚ್ಚುವುದು; ಹೊಡೆತ.
  2. (ಆಡುಮಾತು) (ಮುಖ್ಯವಾಗಿ ದುಂದುವೆಚ್ಚದ) ಸಂತೋಷಕೂಟ.