See also 2thousand
1thousand ತೌಸ(ಸ್‍)ಂಡ್‍
ನಾಮವಾಚಕ
(ಬಹುವಚನ thousands ಯಾ 1ನೇ ಅರ್ಥದಲ್ಲಿ thousand).

(ಏಕವಚನವಾಗಿ a ಯಾ one ಮುಂದೆ ಪ್ರಯೋಗ)

  1. ಸಾವಿರ; ಸಹಸ್ರ.
  2. ಸಾವಿರದ ಸಂಖ್ಯೆ ಯಾ ಚಿಹ್ನೆ (1000, ೧೦೦೦, m, M).
  3. (ಏಕವಚನ ಯಾ ಬಹುವಚನದಲ್ಲಿ) (ಆಡುಮಾತು) ಸಾವಿರಾರು; ಹಲವು; ಅನೇಕ: a thousand times easier ಸಾವಿರಪಾಲು ಸುಭ.
  4. ಸಾವಿರ ವಸ್ತುಗಳ ತಂಡ.
ಪದಗುಚ್ಛ
  1. a thousand thanks (or pardons or apologies) (ಶಿಷ್ಟಾಚಾರದ ಉತ್ಪ್ರೆಕ್ಷೇಯಿಂದ ಕ್ಷಮೆ ಬೇಡುವಾಗ) ಅನಂತಾನಂತ ವಂದನೆಗಳು; (ಬಗ್ಗೆ ಸಾವಿರ ಕ್ಷಮೆ ಇರಲಿ).
  2. one in a thousand (ರೂಪಕವಾಗಿ) (ಬಹಳ ವಿರಳ, ತೀರಾ ಅಪರೂಪ ಎಂಬರ್ಥದಲ್ಲಿ) ಎಲ್ಲೋ ಸಾವಿರಕ್ಕೊಬ್ಬ; ಸಾವಿರಕ್ಕೊಂದು.
  3. (a) thousand and one
    1. ಸಾವಿರದ ಒಂದು.
    2. ಸಾವಿರಾರು; ಅಸಂಖ್ಯಾತ; ಲೆಕ್ಕವಿಲ್ಲದಷ್ಟು: a thousand and one small worries of life ಬಾಳಿನ ಸಾವಿರಾರು ಸಣ್ಣ ಕಿರುಕುಳಗಳು, ಮುಜುಗರಗಳು. a thousand and one excuses ಲೆಕ್ಕವಿಲ್ಲದಷ್ಟು ನೆವಗಳು, ಸಬಊಬಉಗಳು.
See also 1thousand
2thousand ತೌಸ(ಸ್‍)ಂಡ್‍
ಗುಣವಾಚಕ

ಸಾವಿರದ; ಸಾವಿರದಷ್ಟಾಗುವ.