See also 2thought
1thought ತಾಟ್‍
ನಾಮವಾಚಕ
  1. ಯೋಚನೆ; ಆಲೋಚನೆ; ಆಲೋಚನಾ ಶಕ್ತಿ.
  2. (ಒಂದು ನಿರ್ದಿಷ್ಟ ಕಾಲ, ಜನಾಂಗ, ಗುಂಪು, ಮೊದಲಾದವಕ್ಕೆ ಸಂಬಂಧಿಸಿದಂತೆ) ಆಲೋಚನೆಯ–ರೀತಿ, ಮಾರ್ಗ, ವಿಧಾನ: medieval European thought ಮಧ್ಯಯುಗದ ಐರೋಪ್ಯ ಚಿಂತನಾ ವಿಧಾನ.
  3. ಚಿಂತನಾಶಕ್ತಿ; ವಿಚಾರ(ಶಕ್ತಿ).
  4. ಪರ್ಯಾಲೋಚನೆ; ಚಿಂತನೆ; ಪರಾಮರ್ಶೆ; ಪರಿಶೀಲನೆ: after serious thought ಗಂಭೀರ ಪರಿಶೀಲನೆಯ ನಂತರ.
  5. ವಿಚಾರ; ಭಾವನೆ; ಉದ್ದೇಶ; ಅಭಿಪ್ರಾಯ: an essay full of striking thoughts ಗಮನಾರ್ಹ ವಿಚಾರಗಳಿಂದ ಕೂಡಿದ ಪ್ರಬಂಧ.
  6. ಅಮೂರ್ತ ಯೋಚನೆಗಳು; ಅವ್ಯಕ್ತ ಅನಿಸಿಕೆ, ಉದ್ದೇಶ; ಅನಿಶ್ಚಿತ ವಿಚಾರ ಯಾ ಭರವಸೆ: had (some) thoughts of resigning ರಾಜೀನಾಮೆ ಕೊಡಬೇಕೆಂಬ ಅನಿಸಿಕೆಯಲ್ಲಿದ್ದ.
  7. (ಬಹುವಚನದಲ್ಲಿ) ಅಭಿಪ್ರಾಯ; ಚಿಂತನೆ: I will tell you my thoughts on the matter ಆ ವಿಷಯದ ಬಗ್ಗೆ ನನ್ನ ಅಭಿಪ್ರಾಯಗಳನ್ನು ಹೇಳುತ್ತೇನೆ.
  8. (ಮನಸ್ಸಿನಲ್ಲಿ ಮಾಡುತ್ತಿರುವ) ಯೋಚನೆ; ಧ್ಯಾನ; ಆಲೋಚನೆಯ ವಿಷಯ, ವಸ್ತು: his one thought is how to get away ಹೇಗೆ ಹೊರಟುಹೋಗಬೇಕೆನ್ನುವ ಒಂದೇ ಧ್ಯಾನದಲ್ಲಿದ್ದಾನೆ.
  9. ಸ್ವಲ್ಪ(ಮಟ್ಟಿಗೆ); ಕೊಂಚಮಟ್ಟಿಗೆ; ಒಂದಿಷ್ಟು: seems to me a thought arrogant ಸ್ವಲ್ಪಮಟ್ಟಿಗೆ ದುರಹಂಕಾರಿ ಎಂದು ನನಗೆ ಕಾಣಿಸುತ್ತಾನೆ.
ಪದಗುಚ್ಛ
  1. a penny for your thoughts.
  2. give thought to ಯೋಚನೆ, ವಿಚಾರ–ಮಾಡು, ಪರಿಶೀಲಿಸು.
  3. happy thought ಒಳ್ಳೆಯ ಯೋಚನೆ; ಸಂದರ್ಭೋಚಿತ ಸೂಚನೆ, ವಿಚಾರ.
  4. have (or take) no thought for ಗಮನ ಕೊಡದಿರು; ಕಡೆಗಣಿಸು; ನಿರ್ಲಕ್ಷ್ಯದಿಂದಿರು.
  5. in thought ಧ್ಯಾನದಲ್ಲಿ; ಆಲೋಚನೆಯಲ್ಲಿ.
  6. in (person’s) thoughts (ಒಬ್ಬನ) ಮನಸ್ಸಿನಲ್ಲಿ; ಆಲೋಚನೆಯಲ್ಲಿ; ಚಿಂತನೆಯಲ್ಲಿ.
  7. quick as thought ಬಹಳ ಬೇಗ; ಮನೋವೇಗದಲ್ಲಿ.
  8. take thought ವಿಷಯಗಳನ್ನು ಪರಾಮರ್ಶಿಸು.
  9. thought police ಚಿಂತನೆ ಪೊಲೀಸ್‍ (ವ್ಯವಸ್ಥೆ); ಆಲೋಚನೆ ನಿಯಂತ್ರಣ; ಸರ್ವಾಧಿಕಾರಿ ಪ್ರಭುತ್ವದಲ್ಲಿ ಜನರ ಅಂತರಂಗ-ಬಹಿರಂಗ ಕ್ರಿಯೆಗಳೆಲ್ಲವನ್ನೂ ನಿಯಂತ್ರಿಸುವುದು.
See also 1thought
2thought ತಾಟ್‍
ಕ್ರಿಯಾಪದ

think ಕ್ರಿಯಾಪದದ ಭೂತರೂಪ ಮತ್ತು ಭೂತಕೃದಂತ ರೂಪ.