thorn ತಾರ್ನ್‍
ನಾಮವಾಚಕ
  1. ಮುಳ್ಳು; ಕಂಟಕ.
  2. ಮುಳ್ಳು ಮರ ಯಾ ಗಿಡ.
  3. (ಈಗ ಬಳಕೆಯಲ್ಲಿಲ್ಲದ) ಪ್ರಾಚೀನ ಇಂಗ್ಲಿಷ್‍ ಮತ್ತು ಐಸ್‍ಲ್ಯಾಂಡ್‍ನ ರೂನ್‍ ಅಕ್ಷರ, thin ಪದದ th ಗೆ ಸಮಾನ.
ಪದಗುಚ್ಛ
  1. a thorn in one’s flesh (or side) ಇರಿಮುಳ್ಳು; ಕುಟುಕುಮುಳ್ಳು; ನಿತ್ಯ–ವ್ಯಥೆ, ಬಾಧೆ; ಸದಾ ಕಿರುಕುಳ ಕೊಡುವಂಥದ್ದು.
  2. on thorns (ಯಾವ ನಿಮಿಷದಲ್ಲಿ ಸಿಕ್ಕಿಬೀಳುವೆನೋ, ಯಾವ ಗಳಿಗೆಗೆ ಏನೋ ಎಂಬ ಭಯದಿಂದ) ಆತಂಕಗೊಂಡಿರು; ಮುಳ್ಳಮೇಲೆ ನಿಂತಿರು.