See also 2third
1third ತರ್ಡ್‍
ಗುಣವಾಚಕ

ಮೂರನೆಯ; ತೃತೀಯ.

See also 1third
2third ತರ್ಡ್‍
ನಾಮವಾಚಕ
    1. (ಶ್ರೇಣಿಯಲ್ಲಿ) ಮೂರನೆಯ, ತೃತೀಯ–ಸ್ಥಾನ.
    2. ಈ ಸ್ಥಾನದಲ್ಲಿರುವ ವಸ್ತು ಮೊದಲಾದವು.
  1. ಮೂರನೆಯ, ತೃತೀಯ ಭಾಗ; ಯಾವುದೇ ವಸ್ತುವಿನ ಮೂರು ಸಮಭಾಗಗಳಲ್ಲಿ ಒಂದು.
  2. (ಪರೀಕ್ಷೆಯಲ್ಲಿ) ಮೂರನೆಯ ದರ್ಜೆ.
  3. ಮೂರನೆಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ ವ್ಯಕ್ತಿ.
  4. (ಮೋಟಾರು ಚಾಲಿತ ವಾಹನದಲ್ಲಿ) ಮೂರನೆಯ ‘ಗಿಯರು’ ಯಾ ಅಳವಡಿಕೆ.
  5. (ಸಂಗೀತ)
    1. ತ್ರಿಸ್ವರ–ಸ್ವರಖಂಡ ಯಾ ಸ್ಥಾಯಿಭೇದ; ಅಷ್ಟಸ್ವರ ಸ್ವರಶ್ರೇಣಿಯಲ್ಲಿ ಅನುಕ್ರಮವಾದ ಮೂರು ಸ್ವರಗಳನ್ನು ಒಳಗೊಂಡ ಸ್ಥಾಯಿಭೇದ ಯಾ ಸ್ವರಖಂಡ (ಉದಾಹರಣೆಗೆ C ಇಂದ E ವರೆಗೆ).
    2. (ಸಂಗೀತ) ಇನ್ನೊಂದು ಸ್ವರದಿಂದ ಈ ಸ್ಥಾಯಿಭೇದದಷ್ಟು ಅಂತರವಿರುವ ಸ್ವರ.
  6. (ಚರಿತ್ರೆ) (ಬಹುವಚನದಲ್ಲಿ) ತೃತೀಯಾಂಶ; ಕೆಲವು ಸಂದರ್ಭಗಳಲ್ಲಿ ವಿಧವೆಗೆ ಸಲ್ಲತಕ್ಕ, ಗಂಡನ ಆಸ್ತಿಯ ಮೂರನೆಯ ಒಂದು ಭಾಗ.