See also 2thinking
1thinking ತಿಂಕಿಂಗ್‍
ನಾಮವಾಚಕ
  1. ಆಲೋಚನೆ; ಪರ್ಯಾಲೋಚನೆ; ವಿಚಾರ.
    1. ಅಭಿಪ್ರಾಯ; ಅಭಿಮತ; ಭಾವನೆ: what is your thinking on this question ಈ ಸಮಸ್ಯೆಯ ಬಗ್ಗೆ ನಿನ್ನ ಅಭಿಪ್ರಾಯ ಏನು?
    2. ವಿವೇಚನೆಯಿಂದ ತರ್ಕಬದ್ಧವಾಗಿ ಮಾಡಿದ ತೀರ್ಮಾನ.
  2. (ಬಹುವಚನದಲ್ಲಿ)
    1. ಭಾವನೆಗಳು; ಅಭಿಪ್ರಾಯಗಳು.
    2. ಆಲೋಚನಾಲಹರಿಗಳು; ಆಲೋಚನಾ ವಿಧಾನಗಳು.
ಪದಗುಚ್ಛ

put on one’s thinking cap (ಆಡುಮಾತು) ಒಂದು ಸಮಸ್ಯೆ ಕುರಿತು ಪರ್ಯಾಲೋಚಿಸು, ಚಿಂತಿಸು, ವಿಚಾರಮಾಡು; ಆಲೋಚನೆಯ ಕಿರೀಟ ಧರಿಸು; ಪೇಟಾ ಸುತ್ತು.

See also 1thinking
2thinking ತಿಂಕಿಂಗ್‍
ಗುಣವಾಚಕ
  1. ಯೋಚಿಸುವ; ಆಲೋಚನಾಶೀಲ; ವಿಚಾರಶೀಲ; ಯೋಚನಾಪರ; ವಿವೇಚನಾಯುಕ್ತ.
  2. ಆಲೋಚನಾಶಕ್ತಿಯುಳ್ಳ; ಬಉದ್ಧಿಶಕ್ತಿಯುಳ್ಳ.