thimble ತಿಂಬ(ಬ್‍)ಲ್‍
ನಾಮವಾಚಕ
  1. (ದರ್ಜಿಯ) ಬೆರಳು ಕಾಪು; ಬೆರಳು ಟೋಪಿ; ಬೆರಳಿಗೆ ತೊಂದರೆಯಾಗದಂತೆ ಹಾಗೂ ಸೂಜಿ ಒತ್ತಲು ಅನುಕೂಲವಾಗುವ, ಬೆರಳಿನ ಲೋಹರಕ್ಷಣೆ.
  2. (ಯಂತ್ರಶಾಸ್ತ್ರ) ಕೂಡುಕೊಳವೆ; ಎರಡು ಕೊಳವೆಗಳನ್ನು ಕೂಡಿಸುವ, ಸಣ್ಣ ಲೋಹದ ಕೊಳವೆ.
  3. ಕಣ್ಣಿ–ಬಳೆ, ಉಂಗುರ; ಹಗ್ಗ ಉಜ್ಜಿ ಸಮೆಯದಂತೆ ಹಗ್ಗದ ಕುಣಿಕೆಯಲ್ಲಿ ಕಚ್ಚಿ ಹಿಡಿಯುವಂತೆ ಗಾಡಿ ಮಾಡಿ ಹಾಕಿದ, ಹೊರಭಾಗ ನಿಮ್ನವಾಗಿರುವ, ಲೋಹದ ಬಳೆ ಯಾ ಉಂಗುರ. Figure: thimbles