theory ತಿಅರಿ
ನಾಮವಾಚಕ
(ಬಹುವಚನ theories).
  1. ವಾದ; ಮತ; ತತ್ತ್ವ; ಸಿದ್ಧಾಂತ; ತತ್ತ್ವಗಳ ಆಧಾರದ ಮೇಲೆ ಪ್ರತಿಪಾದಿಸಿದ, ಸಮರ್ಥಿಸಿದ–ವಿಚಾರ ಸರಣಿ, ಊಹೆ: atomic theory ಅಣು ಸಿದ್ಧಾಂತ. theory of evolution ವಿಕಾಸವಾದ.
  2. ಊಹೆ; ಕಲ್ಪನೆ: one of my pet theories ನನಗೆ ಪ್ರಿಯವಾದ ಕಲ್ಪನೆಗಳಲ್ಲಿ ಒಂದು.
  3. ತತ್ತ್ವ: in theory ತತ್ತ್ವದಲ್ಲಿ; ಸೈದ್ಧಾಂತಿಕವಾಗಿ; ತಾತ್ತಿ ಕವಾಗಿ.
  4. (ಒಂದು ಶಾಸ್ತ್ರ ಮೊದಲಾದವುಗಳ) ತತ್ತ್ವ ನಿರೂಪಣೆ; ಮೀಮಾಂಸೆ: the theory of music ಸಂಗೀತ ಮೀಮಾಂಸೆ.
  5. (ಗಣಿತ) ತತ್ತ್ವಸೂತ್ರಗಳು; ಒಂದು ವಿಷಯದ ತತ್ತ ಗಳನ್ನು ನಿದರ್ಶನ ಮಾಡಲು ಸಂಗ್ರಹಿಸಿದ ಸೂತ್ರಗಳು: theory of equations ಸಮೀಕರಣಗಳ ಸೂತ್ರಗಳು.
  6. ಸಿದ್ಧಾಂತ ಕ್ಷೇತ್ರ; ತಾತ್ತ್ವಿಕ ವ್ಯಾಪ್ತಿ; ಅಮೂರ್ತ ಜ್ಞಾನದ ಯಾ ಚಿಂತನೆಯ ವ್ಯಾಪ್ತಿ: this is all very well in theory, but how will it work in practice ಇದೆಲ್ಲಾ ಸಿದ್ಧಾಂತದಲ್ಲಿ ಬಹಳ ಚೆನ್ನಾಗಿದೆ, ಆದರೆ ಇದು ಪ್ರಾಯೋಗಿಕವಾಗಿ ಹೇಗೆ ಕೆಲಸ ಮಾಡುತ್ತದೆ?