theocracy ತಿಆಕ್ರಸಿ
ನಾಮವಾಚಕ
(ಬಹುವಚನ theocracies).
  1. ದೇವಪ್ರಭುತ್ವ; ದೇವರೇ ನೇರವಾಗಿ ಆಳುವನೆಂದು ಯಾ ದೇವರೇ ನಿಜವಾದ ರಾಜನೆಂದು ಭಾವಿಸಿರುವ ಯಾ ದೇವರ ಹೆಸರಿನಲ್ಲಿ ಪುರೋಹಿತ, ಅರ್ಚಕ ವರ್ಗ ನಡೆಸುವ ಪ್ರಭುತ್ವ, ಆಳುವ ರಾಜ್ಯ.
  2. (the Theocracy) (ಬೈಬ್‍ಲ್‍) ಮೋಸೆಸ್ಸನ ಕಾಲದಿಂದ ರಾಜಪ್ರಭುತ್ವದವರೆಗಿನ ಯೆಹೂದ್ಯರ ರಾಜ್ಯಾಡಳಿತ.
  3. ಪುರೋಹಿತಶಾಹಿ; ದೇವಪ್ರತಿನಿಧಿಗಳಾಗಿ ಅರ್ಚಕರು ನಡೆಸುವ ಲೌಕಿಕಾಡಳಿತ.