See also 2then  3then
1then ದೆನ್‍
ಕ್ರಿಯಾವಿಶೇಷಣ
  1. ಆಗ; ಅಂದು; ಆ ಸಮಯದಲ್ಲಿ: was then too much occupied ಆಗ ವಿಪರೀತ ಕೆಲಸದಲ್ಲಿದ್ದ.
    1. ಆಮೇಲೆ; ತರುವಾಯ; ಬಳಿಕ; ಅನಂತರ: it must then soak for 2 hours ಆಮೇಲೆ ಅದು ಎರಡು ಗಂಟೆ ಕಾಲ ನೆನೆಯಬೇಕು.
    2. (ಅದೂ) ಅಲ್ಲದೆ; ಜೊತೆಗೆ: then, there are the children to consider ಅದೂ ಅಲ್ಲದೆ, ಮಕ್ಕಳನ್ನೂ ಗಣನೆಗೆ ತೆಗೆದುಕೊಳ್ಳಬೇಕು.
    3. ಅಂತೂ; ಆದರೂ; ಕೊನೆಗೂ: it is a problem, but then that is what we are here for ಅದು ಒಂದು ಸಮಸ್ಯೆಯೇ, ಆದರೂ ನಾವಿಲ್ಲಿರುವುದು ಅದಕ್ಕಾಗಿಯೇ ತಾನೆ.
  2. ಆ ಪಕ್ಷದಲ್ಲಿ; ಹಾಗಾದರೆ; ಹಾಗಿದ್ದರೆ; ಆದ್ದರಿಂದ: then you should have said so ಹಾಗಾದರೆ ನೀನು ಆ ಮಾತನ್ನೇ ಹೇಳಬೇಕಾಗಿತ್ತು.
  3. ಹಾಗಿದ್ದರೆ; ಹಾಗಾದರೆ; ಅದು, ನೀನು ಹೇಳುವುದು ನಿಜವಾಗಿದ್ದರೆ: but then why did you take it? ಹಾಗಿದ್ದರೆ ಅದನ್ನೇಕೆ ತೆಗೆದುಕೊಂಡೆ?
  4. (ಅರೆಮನಸ್ಸಿನ ಯಾ ಅಸಹನೆಯ ಒಪ್ಪಿಗೆ ಸೂಚಿಸುವಾಗ) ಸರಿ; ಹಾಗಾದರೆ: all right then, have it your own way ಸರಿ, ನಿನಗೆ ತೋರಿದಂತೆ, ನಿನ್ನಿಷ್ಟದಂತೆ ಮಾಡು.
  5. (ಕಥನ ಮೊದಲಾದವನ್ನು ಮುಂದುವರೆಸುವ ಮಾತಾಗಿ) ಆ ಪ್ರಕಾರ; ಅದರಂತೆ; ಅದಕ್ಕನುಸಾರವಾಗಿ: the new Governor, then, came prepared ಆ ಪ್ರಕಾರ ಹೊಸ ರಾಜ್ಯಪಾಲರು ತಯಾರಾಗಿ ಬಂದರು.
ಪದಗುಚ್ಛ
See also 1then  3then
2then ದೆನ್‍
ಗುಣವಾಚಕ

ಆಗಿನ; ಅಂದಿನ; ಆ ಕಾಲದ; ಆಗ ಇದ್ದ: the then secretary ಆಗ ಇದ್ದ ಕಾರ್ಯದರ್ಶಿ. the then existing laws ಅಂದು ಅಸ್ತಿತ್ವದಲ್ಲಿದ್ದ ಕಾನೂನುಗಳು.

See also 1then  2then
3then ದೆನ್‍
ನಾಮವಾಚಕ

ಆ ಕಾಲ; ಆ ಹೊತ್ತು; ಅಂದು: before then ಆ ಕಾಲಕ್ಕೆ ಮುಂಚೆ. till then ಅಲ್ಲಿಯವರೆಗೆ. by then ಆ ಹೊತ್ತಿಗೆ ಆಗಲೇ. from then ಆ ಹೊತ್ತಿನಿಂದ; ಅಂದಿನಿಂದ.