themselves ದಮ್‍ಸೆಲ್ವ್‍ಸ್‍
ಸರ್ವನಾಮ
  1. (they ಯಾ them ನ ಅವಧಾರಣ ರೂಪ) ಅವರೇ; ಅವೇ: the authors themselves left the theatre ಗ್ರಂಥಕರ್ತರುಗಳೇ ಖುದ್ದಾಗಿ ರಂಗಮಂದಿರವನ್ನು ಬಿಟ್ಟುಹೋದರು.
  2. (them ಪದದ ಆತ್ಮಾರ್ಥಕ ರೂಪ) ತಮ್ಮನ್ನು ತಾವೇ: they washed themselves quickly ಅವರು ಬೇಗನೆ ತಮ್ಮ ಮೈ ತೊಳೆದುಕೊಂಡರು.
  3. ಯಥಾಸ್ಥಿತಿಗೆ ಬಂದವರು ಯಾ ಬಂದವು: after a few hours rest, they were themselves again ಕೆಲವು ಗಂಟೆಗಳು ವಿಶ್ರಮಿಸಿಕೊಂಡ ನಂತರ ಅವರು ಯಥಾಸ್ಥಿತಿಗೆ ಬಂದರು (ಮೊದಲಿನಂತೆಯೇ ಆದರು).
ಪದಗುಚ್ಛ

be themselves ತಮ್ಮ ಸಾಮಾನ್ಯ ಸ್ಥಿತಿಯಲ್ಲಿ, ಅನಿರ್ಬಂಧಿತವಾಗಿ ಇರಲಿ, ವರ್ತಿಸಲಿ.