theme ತೀಮ್‍
ನಾಮವಾಚಕ
  1. (ಉಪನ್ಯಾಸ, ಲೇಖನ, ಆಲೋಚನೆ, ಮೊದಲಾದವುಗಳ) ವಿಷಯ; ವಸ್ತು.
  2. (ಕೊಟ್ಟ ವಿಷಯದ ಮೇಲೆ ಶಾಲಾ ವಿದ್ಯಾರ್ಥಿ ಬರೆದ) ಪ್ರಬಂಧ; ಲೇಖನ.
  3. (ವ್ಯಾಕರಣ) ನಾಮಪದ ಯಾ ಕ್ರಿಯಾಪದದಲ್ಲಿ ಪ್ರತ್ಯಯ ಹಚ್ಚುವುದಕ್ಕೆ ಹಿಂದಿನ ರೂಪ; ಪ್ರಾತಿಪದಿಕ ಯಾ ಧಾತುರೂಪ.
  4. (ಸಂಗೀತ) (ಸಾಮಾನ್ಯವಾಗಿ ವೈವಿಧ್ಯ ಕೊಟ್ಟು ವಿಸ್ತರಿಸಲಾಗುವ) ಪ್ರಧಾನ ಯಾ ಪುನರಾವರ್ತಕ ಸ್ವರಸಂಗತಿ.
  5. (ಚರಿತ್ರೆ) ಬೈಸಾಂಟೈನ್‍ ಚಕ್ರಾಧಿಪತ್ಯದ 29 ಪ್ರಾಂತಗಳಲ್ಲಿ ಒಂದು.