See also 2thaw
1thaw ತಾ
ನಾಮವಾಚಕ
  1. ನೀರ್ಗಲ್ಲು (ಹಿಮ) ಕರಗುವಿಕೆ; ದ್ರವವಾಗುವಿಕೆ; ದ್ರವೀಭವಿಸುವಿಕೆ.
  2. (ಹವ) (ನೀರ್ಗಲ್ಲು ಕರಗುವಂತೆ) ಬೆಚ್ಚಗಾಗುವುದು; ಉಷ್ಣ ಹವ; ಬಿಸುಪು: a thaw has set in ಉಷ್ಣ ಹವ ಪ್ರಾರಂಭಿಸಿದೆ.
  3. (ರಾಜಕೀಯ) ತಿಳಿಯಾಗಿರುವಿಕೆ; ಶಾಂತತೆ; ನಿರ್ಬಂಧ, ನಿಯಂತ್ರಣ, ಬಿಕ್ಕಟ್ಟು ಯಾ ಸಂಘರ್ಷ ಇಲ್ಲದಿರುವಿಕೆ.
See also 1thaw
2thaw ತಾ
ಸಕರ್ಮಕ ಕ್ರಿಯಾಪದ
  1. ಕರಗಿಸು; ನೀರಾಗಿಸು; ಕರಗಿ ನೀರಾಗುವಂತೆ ಮಾಡು.
  2. ಚೈತನ್ಯಗೊಳಿಸು; ಹುರುಪು ಹುಟ್ಟಿಸು.
  3. ಸೌಹಾರ್ದ ಉಂಟುಮಾಡು; ಪ್ರೀತಿ ಹುಟ್ಟಿಸು.
ಅಕರ್ಮಕ ಕ್ರಿಯಾಪದ
  1. (ನೀರ್ಗಲ್ಲು, ಹಿಮ, ಗಡ್ಡೆ ಕಟ್ಟಿದ ವಸ್ತು, ಮೊದಲಾದವುಗಳ ವಿಷಯದಲ್ಲಿ) ದ್ರವೀಭವಿಸು; ಕರಗು; ಕರಗಿ ನೀರಾಗು
  2. (ಹವ) ಹಿಮ ಕರಗಿಸುವಷ್ಟು ಬೆಚ್ಚಗಾಗು; ನೀರ್ಗಲ್ಲ ಶಾಖಕ್ಕಿಂತ ಹೆಚ್ಚಾಗು.
  3. (ಸೆಡೆತ, ಜೋಮು, ಮೊದಲಾದವನ್ನು ನೀಗುವಷ್ಟು) ಬೆಚ್ಚಗಾಗು.
  4. (ರೂಪಕವಾಗಿ)(ಕಾಠಿಣ್ಯ, ಅನಾದರ, ನಿರುತ್ಸಾಹ, ಹಠ, ಮೊದಲಾದವನ್ನು ಬಿಟ್ಟು) ಉತ್ಸಾಹ ತೋರು; ಆದರ ತೋರಿಸು; ಸ್ನೇಹಪರನಾಗು; ಪ್ರಸನ್ನವಾಗು.