thank ತ್ಯಾಂಕ್‍
ಸಕರ್ಮಕ ಕ್ರಿಯಾಪದ
  1. ಕೃತಜ್ಞತೆ ಸೂಚಿಸು, ಹೇಳು; ವಂದನೆ, ಧನ್ಯವಾದ–ಅರ್ಪಿಸು; ಉಪಕಾರ ಸ್ಮರಿಸು; ಆಭಾರಿಯಾಗಿರು; ಆಭಾರ ಮನ್ನಿಸು: thanked him for the present ಕಾಣಿಕೆಗಾಗಿ ಅವನಿಗೆ ಧನ್ಯವಾದ ಅರ್ಪಿಸಿದ.
  2. (ವ್ಯಂಗ್ಯವಾಗಿ) ಜವಾಬ್ದಾರಿ ಹೊತ್ತುಕೊ; ದೂಷಿಸಿಕೊ; ಬೈದುಕೊ: you have only yourself to thank ಅದಕ್ಕೆ ನೀನೇ ಜವಾಬ್ದಾರಿ ಹೊರಬೇಕು; ಅದಕ್ಕಾಗಿ ನಿನ್ನನ್ನು ನೀನೇ ಬೈದುಕೊಳ್ಳಬೇಕು, ಅಷ್ಟೆ. he has only himself to thank (or he can thank himself) for that ಅದಕ್ಕೆ ಅವನೇ ಜವಾಬ್ದಾರ.
ಪದಗುಚ್ಛ
  1. I thank you for nothing (ತಿರಸ್ಕಾರದಿಂದ ನಿರಾಕರಿಸುವಾಗ) ನಾನು ನಿಮಗೆ ವಂದನೆ ಹೇಳುವ ಅಗತ್ಯವಿಲ್ಲ; ನಮಸ್ಕಾರವೇನೂ ಬೇಕಾಗಿಲ್ಲ.
  2. (I) thank you ನಿಮಗೆ ನನ್ನ ವಂದನೆಗಳು; ನಿಮ್ಮ ಉಪಕಾರ ಸ್ಮರಿಸುವೆ (ಇನ್ನೊಬ್ಬರಿಂದ ಸೇವೆ ಯಾ ಕಾಣಿಕೆ ಮೊದಲಾದವನ್ನು ಸ್ವೀಕರಿಸುವಾಗ ಯಾ ನಿರಾಕರಿಸುವಾಗ ಶಿಷ್ಟಾಚಾರಕ್ಕೆ ಬಳಸುವ ಕೃತಜ್ಞತೆಯ ಮಾತುಗಳು.)
  3. I will thank you (ಶಿಷ್ಟಾಚಾರದ ಒಕ್ಕಣೆ) ನಿಮಗೆ ಕೃತಜ್ಞನಾಗಿರುತ್ತೇನೆ (ಈಗ ಸಾಮಾನ್ಯವಾಗಿ ನಿಂದಾರ್ಥಕ ವ್ಯಂಗ್ಯ ಪ್ರಯೋಗ): I will thank you to leave my affairs ನೀವು ದಯವಿಟ್ಟು ನನ್ನ ವ್ಯವಹಾರಗಳಲ್ಲಿ ಕೈಹಾಕದಿದ್ದರೆ, ನಿಮಗೆ ನನ್ನ ವಂದನೆಗಳು.
  4. thank God (or goodness or heavens) ಸದ್ಯ, ದೇವರ ದಯೆ! ಸದ್ಯ ಬದುಕಿದೆ (ಸಂತೋಷ ಯಾ ನೆಮ್ಮದಿ, ಸಮಾಧಾನ, ಕೃತಜ್ಞತಾಸೂಚಕ ಉದ್ಗಾರಗಳು).
  5. thank you for the help (ಮಾಡಲಿರುವ ಉಪಕಾರಕ್ಕಾಗಿ ಪೂರ್ವಭಾವಿಯಾಗಿ ಹೇಳುವ ಒಕ್ಕಣೆ) ದಯವಿಟ್ಟು ಸಹಾಯ ಮಾಡಿ; ಸಹಾಯ ಮಾಡಿದರೆ ಕೃತಜ್ಞನಾಗಿರುತ್ತೇನೆ ಇತ್ಯಾದಿ.