See also 2texture
1texture ಟೆಕ್ಸ್‍ಚರ್‍
ನಾಮವಾಚಕ
  1. ರೂಪ ಯಾ ಸ್ಪರ್ಶ; ತಲವೊಂದರ ಯಾ ವಸ್ತುವೊಂದರ ದೃಶ್ಯರೂಪ ಯಾ ಸ್ಪರ್ಶಜ್ಞಾನ.
  2. ನೆಯ್ಗೆ; ನೆಯ್ದ ಬಟ್ಟೆಯಲ್ಲಿನ ಎಳೆಗಳ ಸಂಯೋಜನೆ, ವಿನ್ಯಾಸ.
  3. ಅಂಗಭಾಗಗಳ–ಸಂಯೋಜನೆ, ವಿನ್ಯಾಸ, ವ್ಯವಸ್ಥಾಕ್ರಮ.
  4. (ಕಲೆ) ರಚನಾಚಿತ್ರಣ; ವಸ್ತುಗಳ ಬಣ್ಣಕ್ಕಿಂತ ಭಿನ್ನವಾಗಿರುವ, ಅವುಗಳ (ಮುಖ್ಯವಾಗಿ ಚರ್ಮ, ಮೇಲ್ಮೈ, ಮೊದಲಾದವುಗಳ) ರಚನೆ ಮತ್ತು ವಿವರಗಳ ಚಿತ್ರಣ.
  5. (ಸಂಗೀತ) ಸ್ವರಸಂಯೋಜನೆಯಿಂದ ಯಾ ಸ್ವರಮೇಳದಿಂದ ಜನಿಸುವ ನಾದಗುಣ.
  6. ಶಯ್ಯೆ; ಬಂಧ; ಅಲಂಕಾರ, ಪ್ರಾಸ, ಮೊದಲಾದವುಗಳಿಗೆ ಸಂಬಂಧಿಸಿದಂತೆ, ಬರೆಹವೊಂದರ ಗುಣ.
  7. ಸಂಯೋಜನೆಯಿಂದ, ವಿನ್ಯಾಸದಿಂದ ಒದಗಿದ–ಗುಣ, ಲಕ್ಷಣ, ರೀತಿ: the texture of her life ಅವಳ ಬದುಕಿನ ರೀತಿ, ಶೈಲಿ.
See also 1texture
2texture ಟೆಕ್ಸ್‍ಚರ್‍
ಸಕರ್ಮಕ ಕ್ರಿಯಾಪದ
  1. ನೆಯ್ದು ರಚಿಸು.
  2. (ಬಟ್ಟೆ ಮೊದಲಾದವುಗಳಿಗೆ) ರಚನೆ ಒದಗಿಸು; ವಿನ್ಯಾಸ ಕಲ್ಪಿಸು.