testimony ಟೆಸ್ಟಿಮನಿ
ನಾಮವಾಚಕ
(ಬಹುವಚನ testimonies).
  1. ಸಾಕ್ಷ್ಯ; ಪ್ರಮಾಣ; ರುಜುವಾತು: called him in testimony ಸಾಕ್ಷಿಯಾಗಿ ಅವನನ್ನು ಕರೆದರು. produce testimony ಸಾಕ್ಷ್ಯ–ತೋರಿಸು, ಒದಗಿಸು.
  2. (ನ್ಯಾಯಶಾಸ್ತ್ರ) ಪ್ರಮಾಣ ಮಾಡಿ ಕೊಟ್ಟ ಹೇಳಿಕೆ; ಕೈಹಿಯತ್ತು; ಪ್ರಮಾಣ.
  3. ಘೋಷಣೆಗಳು; ಹೇಳಿಕೆಗಳು; ಸಾಕ್ಷ್ಯ; ಪುರಾವೆ: must rely on the testimony of history ಚರಿತ್ರೆಯ ಸಾಕ್ಷ್ಯವನ್ನೇ ಅವಲಂಬಿಸಬೇಕು. testimony of historians ಇತಿಹಾಸಕಾರರ ಮಾತುಗಳು, ಹೇಳಿಕೆಗಳು.
  4. (ಪ್ರಾಚೀನ ಪ್ರಯೋಗ)(ಧರ್ಮದಲ್ಲಿನ ನಂಬಿಕೆ, ಶ್ರದ್ಧೆ, ಮೊದಲಾದವುಗಳನ್ನು) ಬಹಿರಂಗವಾಗಿ ಘೋಷಿಸುವುದು ಯಾ ಒಪ್ಪಿಕೊಳ್ಳುವುದು.
  5. (ಬೈಬ್‍ಲ್‍)(ಕ್ರೈಸ್ತರ) ದಶ ಶಾಸನಗಳು.