territory ಟೆರಿಟರಿ, ಟೆರಿಟ್ರಿ
ನಾಮವಾಚಕ
(ಬಹುವಚನ territories).
  1. ಸೀಮೆ; ಪ್ರದೇಶ; (ವಿಸ್ತಾರ) ಭೂಪ್ರದೇಶ; ನಾಡು; (ರಾಜನ ಯಾ ರಾಷ್ಟ್ರದ ಆಡಳಿತಕ್ಕೆ ಸೇರಿರುವ, ಗೊತ್ತಾದ ಎಲ್ಲೆಗಳಿರುವ) ರಾಜ್ಯ.
  2. (ರೂಪಕವಾಗಿ) (ಕಾರ್ಯಾಚರಣೆ, ವಿಚಾರ, ಮೊದಲಾದವುಗಳ) ಕ್ಷೇತ್ರ; ರಂಗ.
  3. ವಾಣಿಜ್ಯಕ್ಷೇತ್ರ; ವಾಣಿಜ್ಯ ವಸ್ತುಗಳನ್ನು ವಿತರಣೆ ಮಾಡುವವನ ಯಾ ಸಂಚಾರಿ ವ್ಯಾಪಾರಿಯ ವ್ಯಾಪ್ತಿಯ ಕ್ಷೇತ್ರ.
  4. ವಿಶಾಲ ಭೂಪ್ರದೇಶ.
  5. (ಪ್ರಾಣಿವಿಜ್ಞಾನ) ಪ್ರಾಣಿಕ್ಷೇತ್ರ; ಒಂದು ಪ್ರಾಣಿ ಯಾ ಪ್ರಾಣಿಗಳು ಅದೇ ಜಾತಿಯ ಇತರ ಪ್ರಾಣಿಗಳ ವಿರುದ್ಧವಾಗಿ ತನ್ನ ಯಾ ತಮ್ಮ ಸ್ವಾಮ್ಯದಲ್ಲಿಟ್ಟುಕೊಂಡಿರುವ ಭೂಪ್ರದೇಶ.
  6. (ಆಟ) ಒಂದು ತಂಡ ರಕ್ಷಿಸಲು ಹೋರಾಡುವ ಆಟದ ಕ್ಷೇತ್ರ.
  7. (Territory) ( ಮುಖ್ಯವಾಗಿ ಉತ್ತರ ಅಮೆರಿಕ ಸಂಸ್ಥಾನದಲ್ಲಿನ) ಅಧೀನ ರಾಜ್ಯ; ಸ್ವತಂತ್ರಸಂಸ್ಥಾನದ ಹಕ್ಕುಗಳನ್ನು ಇನ್ನೂ ಪಡೆದಿಲ್ಲದ, ಆದರೆ ವ್ಯವಸ್ಥಿತವಾದ, ದೇಶ ಭಾಗ.