See also 2terrace
1terrace ಟೆರ(ರಿ)ಸ್‍
ನಾಮವಾಚಕ
  1. (ಸ್ವಾಭಾವಿಕವಾದ ಯಾ ಕೃತಕವಾಗಿ ರಚಿಸಿದ) ಎತ್ತರದ ಮಟ್ಟ; ತಾರಸಿ ನೆಲ; ಎತ್ತರಿಸಿದ ಪ್ರದೇಶ.
  2. (ಕೃಷಿಗಾಗಿ ನಿರ್ಮಿಸಿದ) ಮೆಟ್ಟಿಲುಪಾತಿ; ಇಳಿಜಾರು ನೆಲದ ಮೇಲೆ ಹಂತಹಂತವಾಗಿ ರಚಿಸಿದ ಚಪ್ಪಟೆ ಪ್ರದೇಶ.
  3. (ಮನೆಯ ಪಕ್ಕದಲ್ಲಿನ) ಜಗಲಿ; ಜಗತಿ(ಕಟ್ಟೆ).
    1. ದಿಬ್ಬ ಮನೆಸಾಲು; ಸೋಪಾನ ಗೃಹಪಂಕ್ತಿ; ಬೆಟ್ಟದ ನೆತ್ತಿಯ ಮೇಲೆ ಯಾ ಪಕ್ಕದ ಇಳಿಜಾರಿನಲ್ಲಿ ಯಾ ರಸ್ತೆಗಿಂತ ಸ್ವಲ್ಪ ಎತ್ತರಿಸಿದ ಜಾಗದಲ್ಲಿ ಕಟ್ಟಿದ ಮನೆಗಳ ಸಾಲು.
    2. ಒಂದೇ ನಮೂನೆಯಲ್ಲಿ ಒಂದೇ ತಂಡವಾಗಿ ಯಾ ವಿಭಾಗವಾಗಿ ಕಟ್ಟಿದ ಮನೆಗಳ ಸಾಲು; ವಠಾರ.
  4. (ಭೂವಿಜ್ಞಾನ) ಜಗಲಿ ದಂಡೆ; (ನದಿ, ಸರೋವರ, ಸಮುದ್ರ, ಮೊದಲಾದವುಗಳ) ಪಕ್ಕದಲ್ಲಿನ ಎತ್ತರಿಸಿದ ಮಟ್ಟಸ ಪ್ರದೇಶ.
  5. (ಆಟದ ಮೈದಾನದಲ್ಲಿ ಪ್ರೇಕ್ಷಕರು ಕುಳಿತುಕೊಳ್ಳಲು ರಚಿಸಿದ) ಮೆಟ್ಟಿಲು ಆಸನಸಾಲು; ಸೋಪಾನಪೀಠ ಪಂಕ್ತಿ.
See also 1terrace
2terrace ಟೆರ(ರಿ)ಸ್‍
ಸಕರ್ಮಕ ಕ್ರಿಯಾಪದ

ತಾರಸಿ ಮಾಡು; ಜಗಲಿ ಕಟ್ಟು; ತಾರಸಿ ಕಟ್ಟು; ಜಗಲಿಯಾಗಿ ಯಾ ಜಗತಿಯ ಹಾಗೆ ರಚಿಸು.