tentacle ಟೆಂಟಕ(ಕ್‍)ಲ್‍
ನಾಮವಾಚಕ
  1. ಗ್ರಹಣಾಂಗ; ಸ್ಪರ್ಶಾಂಗ; ಏನನ್ನಾದರೂ ಮುಟ್ಟಲು, ಹುಡುಕಲು, ಹಿಡಿಯಲು ಯಾ ಚಲಿಸಲು ನೆರವಾಗುವಂತೆ, (ಮುಖ್ಯವಾಗಿ ಅಕಶೇರುಕ) ಪ್ರಾಣಿಗಳಿಗೆ ಇರುವ, ಉದ್ದನೆಯ ಬಳುಕು ಅಂಗ.
  2. ಸ್ಪರ್ಶಾಂಗದಂತೆ ಬಳಸುವ ವಸ್ತು; ಸ್ಪರ್ಶಕ.
  3. (ಸಸ್ಯವಿಜ್ಞಾನ)(ಹಿಡಿದುಕೊಳ್ಳಲು ಯಾ ಚಲಿಸಲು ಸಹಾಯಕವಾದ) ಸಸ್ಯದ (ಮೈಮೇಲಿನ) ರೋಮ ಯಾ ಗ್ರಾಹಕ ತಂತು.
  4. (ಅಗೋಚರವಾಗಿ ಹರಡುವ) ಪ್ರಭಾವ ಮತ್ತು ನಿಯಂತ್ರಣ: the Party’s tentacles reached into every part of the country ಪಕ್ಷದ ಪ್ರಭಾವ ಮತ್ತು ನಿಯಂತ್ರಣ ದೇಶದ ಪ್ರತಿಯೊಂದು ಭಾಗಕ್ಕೂ ಹರಡಿತು, ಭಾಗವನ್ನೂ ಹೊಕ್ಕಿತು.