See also 2tense  3tense
1tense ಟೆನ್ಸ್‍
ನಾಮವಾಚಕ

(ವ್ಯಾಕರಣ) ಕಾಲರೂಪ:

  1. ಕ್ರಿಯೆಯ ಕಾಲ ಸೂಚಿಸಲು ಧಾತು ತಳೆಯುವ ರೂಪ.
  2. (ವ್ಯಾಕರಣ) ವಿವಿಧ ಪುರುಷ ಹಾಗೂ ಸಂಖ್ಯಾವಾಚಕಗಳಿಗನುಸಾರವಾಗಿ ಬರುವ ಕಾಲರೂಪಗಳು.
See also 1tense  3tense
2tense ಟೆನ್ಸ್‍
ಗುಣವಾಚಕ
  1. (ಹುರಿ, ತೆಳುಚರ್ಮ, ನರ, ಮೊದಲಾದವುಗಳ ವಿಷಯದಲ್ಲಿ) ಬಿಗಿಯಾಗಿ ಎಳೆದ, ತುಯ್ದ: a tense cord ತುಯ್ದ ಹಗ್ಗ.
  2. (ಮನಸ್ಸು, ಭಾವ, ಮೊದಲಾದವುಗಳ ವಿಷಯದಲ್ಲಿ) ಬಿಗುವಿನ; ಸೆಟೆದ, ಉದ್ವಿಗ್ನ: a tense emotion ಸೆಟೆದುಕೊಂಡ ಭಾವ. tense nerves ಉದ್ವಿಗ್ನಗೊಂಡ ನರಗಳು, ಮನಃಸ್ಥಿತಿ.
  3. ಬಿಗಿತದ; ಬಿಗುವಿನ; ಉದ್ವೇಗದಿಂದ ತುಯ್ಯುವ, ತುಂಬಿದ: a tense moment ಉದ್ವೇಗದ ಗಳಿಗೆ.
  4. (ಧ್ವನಿವಿಜ್ಞಾನ) ಧ್ವನಿಸ್ನಾಯುವನ್ನು ಸೆಟೆದು ಉಚ್ಚರಿಸಿದ.
See also 1tense  2tense
3tense ಟೆನ್ಸ್‍
ಸಕರ್ಮಕ ಕ್ರಿಯಾಪದ
  1. ಬಿಗಿಯಾಗಿ ಎಳೆ; ತುಯ್ಯಿ.
  2. ಉದ್ವಿಗ್ನಗೊಳಿಸು.
ಅಕರ್ಮಕ ಕ್ರಿಯಾಪದ
  1. ಬಿಗಿದುಕೊ; ಸೆಟೆದುಕೊ.
  2. ಉದ್ವಿಗ್ನಗೊಳ್ಳು.
ಪದಗುಚ್ಛ

tense up

  1. ಸೆಟೆದುಕೊ; ಬಿಗಿದುಕೊ.
  2. ಉದ್ವಿಗ್ನಗೊಳ್ಳು.