tenement ಟೆನಿಮಂಟ್‍
ನಾಮವಾಚಕ
  1. ಒಬ್ಬನ ಸ್ವಾಧೀನಾನುಭವದಲ್ಲಿರುವ–ಮೀನು, ಭೂಮಿ.
  2. (ನ್ಯಾಯಶಾಸ್ತ್ರ)(ಧಣಿಗೆ ಅಧೀನನಾಗಿ ಪಡೆದಿರುವ) ಸ್ಥಿರಸ್ವತ್ತು; ಸ್ಥಿರ ಆಸ್ತಿ (ಉದಾಹರಣೆಗೆ ಜಮೀನು, ಗೇಣಿ, ಮೊದಲಾದವು).
  3. ವಸತಿ; ನಿವಾಸ; ವಾಸದ ಸ್ಥಳ.
  4. ವಾಸದ ಮನೆ; ವಾಸಗೃಹ.
  5. ವಠಾರ; ಗೃಹಸಮುಚ್ಚಯ; ಮನೆಯೊಂದನ್ನು ಯಾ ಗೃಹಸಮುಚ್ಚಯವೊಂದನ್ನು ಪ್ರತ್ಯೇಕ ಭಾಗಗಳಾಗಿ ವಿಭಾಗಿಸಿ ಸ್ವತಂತ್ರ ಸಂಸಾರಗಳಿಗೆ ಬಾಡಿಗೆಗೆ ಕೊಟ್ಟಿರುವ ಕೋಣೆ ಯಾ ಕೋಣೆಗಳ, ಮನೆಗಳ ತಂಡ.