temporal ಟೆಂಪರ(ರ್‍)ಲ್‍
ಗುಣವಾಚಕ
  1. (ಆಧ್ಯಾತ್ಮಿಕ ಯಾ ಪಾರಲೌಕಿಕಕ್ಕೆ ವಿರುದ್ಧವಾಗಿ) ಇಹಜೀವನದ; ಐಹಿಕ; ಲೌಕಿಕ; ಪ್ರಾಪಂಚಿಕ: temporal affairs ಪ್ರಾಪಂಚಿಕ ವ್ಯಾಪಾರಗಳು. temporal interests ಐಹಿಕ ಹಿತಾಸಕ್ತಿಗಳು.
  2. ಅನಿತ್ಯ; ಅಶಾಶ್ವತ; ಅಲ್ಪಕಾಲಿಕ; ಕ್ಷಣಿಕ: temporal joy ಅಲ್ಪಕಾಲಿಕ ಸಂತೋಷ.
  3. ಕಾಲದ; ಕಾಲಕ್ಕೆ ಸಂಬಂಧಿಸಿದ.
  4. (ವ್ಯಾಕರಣ) ಕಾಲಸೂಚಕ: temporal conjunction ಕಾಲಸೂಚಕ ಸಂಯೋಜಕ ಅವ್ಯಯ.
  5. ಕಪೋಲದ; ಗಂಡಸ್ಥಳದ: temporal bone ಕಪೋಲ ಮೂಳೆ; ಗಂಡಾಸ್ಥಿ.