temperature ಟೆಂಪ್ರಿಚರ್‍
ನಾಮವಾಚಕ
  1. ಕಾವು; ಉಷ್ಣ; ಶಾಖ; ತಾಪ; (ಮುಖ್ಯವಾಗಿ ಉಷ್ಣಮಾಪಕದಿಂದ ಯಾ ಕೈಯಿಂದ ಮುಟ್ಟಿದಾಗ ಕಂಡುಬರುವ) ಒಂದು ಪದಾರ್ಥದ ಯಾ ವಾಯುಮಂಡಲದ ಶಾಖದ ಮಟ್ಟ ಯಾ ತೀಕ್ಷ್ಣತೆ.
  2. (ವೈದ್ಯಶಾಸ್ತ್ರ) ದೇಹದ ತಾಪ; ದೇಹದೊಳಗಿನ ಶಾಖ; ಮೈಕಾವು.
  3. (ಆಡುಮಾತು) ಬಿಸಿ; ದೇಹದ ಸಾಮಾನ್ಯ ಶಾಖಕ್ಕಿಂತ ಹೆಚ್ಚಿರುವ ಸ್ಥಿತಿ: have a temperature ಮೈಬಿಸಿಯಾಗಿರು; ಜ್ವರ ಬಂದಿರು.
  4. (ಚರ್ಚೆ ಮೊದಲಾದವುಗಳಲ್ಲಿ) ಉಂಟಾಗುವ ಉದ್ವಿಗ್ನತೆಯ ಮಟ್ಟ; ಮಾತಿನ–ಕಾವು, ಶಾಖ, ಬಿಸಿ.
ಪದಗುಚ್ಛ
  1. run a temperature ಜ್ವರ ಬಂದಿರು.
  2. take a person’s temperature (ಕಾಯಿಲೆಯಲ್ಲಿ ದೇಹದ ಸಾಮಾನ್ಯ ಶಾಖಕ್ಕಿಂತ ವ್ಯತ್ಯಾಸವಿರುವುದನ್ನು ತಿಳಿಯಲು) ದೇಹಶಾಖ ಅಳೆ, ಪರೀಕ್ಷಿಸು.