temperate ಟೆಂಪರಟ್‍
ಗುಣವಾಚಕ
  1. (ಮಾತು, ನಡವಳಿಕೆ, ಊಟ, ಕುಡಿತ, ಮೊದಲಾದವುಗಳ ವಿಷಯದಲ್ಲಿ) ಮಿತದ; ಹಾಳತದ; ಮಿತಾಚಾರದ; ಸಂಯಮದ.
  2. ವೈಪರೀತ್ಯಗಳಿಲ್ಲದ; ಸಮಧಾತುವಿನ.
  3. (ಒಂದು ಪ್ರದೇಶದ ಯಾ ವಾಯುಗುಣದ ವಿಷಯದಲ್ಲಿ) ಸೌಮ್ಯಗುಣದ; ಸಮಶೀತೋಷ್ಣದ.