tell-tale ಟೆಲ್‍ಟೇಲ್‍
ನಾಮವಾಚಕ
  1. ಚಾಡಿಕೋರ; ಪಿಸುಣಿಗ; ಪಿಸುಣಾಡಿ; ಸುದ್ದಿಕೋರ; ಇತರರ (ಮುಖ್ಯವಾಗಿ ಗೌರವಾರ್ಹವಲ್ಲದ) ಖಾಸಗಿ ವ್ಯವಹಾರಗಳು ಮತ್ತು ವರ್ತನೆಗಳನ್ನು ತಿಳಿಸುವ, ಪ್ರಕಟಿಸುವ ವ್ಯಕ್ತಿ.
  2. (ರೂಪಕವಾಗಿ) ಒಬ್ಬನ ಆಲೋಚನೆಗಳು, ನಡೆವಳಿ, ಮೊದಲಾದವನ್ನು ಎತ್ತಿ ತೋರಿಸುವ, ರಟ್ಟು ಮಾಡುವ ವಸ್ತು, ಸಂಗತಿ, ಸನ್ನಿವೇಶ, ಮೊದಲಾದವು (ಮುಖ್ಯವಾಗಿ ವಿಶೇಷಣವಾಗಿ ಪ್ರಯೋಗ): tell-tale blushes ಎದ್ದುಕಾಣುವ ಕೆನ್ನೆಗೆಂಪು. the tell-tale clay on his shoes ಅವನ ಪಾದರಕ್ಷೆಗಳ ಮೇಲೆ ಎದ್ದುಕಾಣುವಂತೆ ಅಂಟಿಕೊಂಡಿದ್ದ ಜೇಡಿಮಣ್ಣು.
  3. ಸ್ವಯಂ ಸೂಚಕ; ಸ್ವಯಂದರ್ಶಕ; ಪ್ರಕ್ರಿಯೆ, ಕಾರ್ಯ, ಮೊದಲಾದವನ್ನು ತಂತಾನೆ ನಿಯಂತ್ರಿಸುವ ಯಾ ದಾಖಲಿಸುವ ಸಾಧನ.
    1. (ನೌಕಾಯಾನ) ಚುಕ್ಕಾಣಿ ಹಿಡಿಕೆ ಸೂಚಿ; ಚುಕ್ಕಾಣಿಯ ಹಿಡಿಕೆ ತಿರುಗಿರುವ ನೆಲೆಯನ್ನು ತೋರಿಸುವ ಸೂಚಿ.
    2. ನೌಕಾ ಗತಿಸೂಚಿ; ಹಡಗಿನ ಗತಿ ವ್ಯತ್ಯಾಸ ತಿಳಿಯಲು (ಸಾಮಾನ್ಯವಾಗಿ ಕ್ಯಾಪ್ಟನ್‍ನ ಕೋಣೆಯಲ್ಲಿ) ತೂಗುಹಾಕಿದ ದಿಕ್ಸೂಚಿ.