television ಟೆಲಿವಿಷ(ಷ್‍)ನ್‍
ನಾಮವಾಚಕ
  1. ದೂರದರ್ಶನ; ಟೆಲಿವಿಷನ್‍; ರೇಡಿಯೋ ಸಿಗ್ನಲ್ಲುಗಳ ಮೂಲಕ (ಸಾಮಾನ್ಯವಾಗಿ ಧ್ವನಿಯೊಡನೆ) ರವಾನಿಸಿದ ದೃಗ್ಗೋಚರ ಬಿಂಬಗಳನ್ನು ಪರದೆಯ ಮೇಲೆ ಪುನರುತ್ಪಾದಿಸುವ ವ್ಯವಸ್ಥೆ.
  2. ದೂರವೀಕ್ಷಣ; (ಟೆಲಿವಿಷನ್‍ ಹಾಗೆ) ದೂರದ ವಸ್ತು ಮೊದಲಾದವನ್ನು ವೀಕ್ಷಿಸುವುದು, ಕಾಣುವುದು, ನೋಡುವುದು.
  3. ದೂರದರ್ಶನ–ಪ್ರಸಾರ ಯಾ ಕಾರ್ಯಕ್ರಮ.
  4. = television set.