teleology ಟೆ(ಟೀ)ಲಿಆಲಜಿ
ನಾಮವಾಚಕ
(ಬಹುವಚನ teleologies).

ಮೂಲಸಂಕಲ್ಪ ಸಿದ್ಧಾಂತ:

  1. (ತತ್ತ್ವಶಾಸ್ತ್ರ) ಪೂರ್ವಸಿದ್ಧಕಾರಣ ಸಾಮಗ್ರಿಗಿಂತ ಹೆಚ್ಚಾಗಿ ಸೃಷ್ಟಿಯ ಪರಮೋದ್ದೇಶಕ್ಕನುಗುಣವಾಗಿ ಜಗತ್ತಿನ, ಪ್ರಕೃತಿಯ ರಚನೆ ಮತ್ತು ವಿಕಾಸ ನಡೆಯುತ್ತದೆಂಬ ವಾದ, ಸಿದ್ಧಾಂತ.
  2. (ದೇವತಾಶಾಸ್ತ್ರ) ಭೌತಪ್ರಪಂಚದ, ಜಡಸೃಷ್ಟಿಯ ಹಿಂದೆ ಒಂದು ಉದ್ದೇಶ ಮತ್ತು ಸಂಕಲ್ಪ ಇದೆಯೆಂಬ ವಾದ.