See also 2teem
1teem ಟೀಮ್‍
ಅಕರ್ಮಕ ಕ್ರಿಯಾಪದ
  1. ತುಂಬಿರು; ಭರಿತವಾಗಿರು: forests teem with snakes ಕಾಡುಗಳು ಹಾವುಗಳಿಂದ ತುಂಬಿರುತ್ತವೆ. book teems with blunders ಪುಸ್ತಕ ದೋಷಗಳಿಂದ ತುಂಬಿದೆ.
  2. ಹೇರಳವಾಗಿರು; ಮಸ್ತಾಗಿರು; ಸಮೃದ್ಧವಾಗಿರು; ವಿಪುಲವಾಗಿರು; ಯಥೇಚ್ಫವಾಗಿರು: fish teem in these waters ಈ ನೀರಿನಲ್ಲಿ ಮೀನುಗಳು ಮಸ್ತಾಗಿವೆ.
See also 1teem
2teem ಟೀಮ್‍
ಸಕರ್ಮಕ ಕ್ರಿಯಾಪದ

(ಪ್ರಾಂತೀಯ ಪ್ರಯೋಗ ಯಾ ಪಾರಿಭಾಷಿಕ) (ಒಳಗಿರುವುದನ್ನು ಹೊರಕ್ಕೆ ಸುರಿದು, ಚೆಲ್ಲಿ ಪಾತ್ರೆ ಮೊದಲಾದವನ್ನು) ಬರಿದು ಮಾಡು; ಖಾಲಿ ಮಾಡು.

ಅಕರ್ಮಕ ಕ್ರಿಯಾಪದ

(ನೀರು) ಧಾರಾಕಾರವಾಗಿ ಹೊರಚೆಲ್ಲು; ಹೊರಸೂಸು; ಸುರಿದುಹೋಗು; ಹರಿದು ಹೋಗು