See also 2tease
1tease ಟೀಸ್‍
ಸಕರ್ಮಕ ಕ್ರಿಯಾಪದ
  1. (ಹಾಸ್ಯ, ಪ್ರಶ್ನೆ, ಮೊದಲಾದವುಗಳಿಂದ) ಕಿರುಕುಳ ಕೊಡು; ಕೀಟಲೆ ಮಾಡು; ಗೋಳಾಡಿಸು; ಗೋಳು ಹೊಯ್ದುಕೊ; ರೇಗಿಸು; ಚುಡಾಯಿಸು; ಕಿಚಾಯಿಸು.
  2. (ಅಮೆರಿಕನ್‍ ಪ್ರಯೋಗ) (ಏನನ್ನಾದರೂ ಮಾಡುವಂತೆ ಒಬ್ಬ ವ್ಯಕ್ತಿಯನ್ನು) ಕಾಡು; ಪೀಡಿಸು; ಗೋಳುಗುಟ್ಟಿಸು.
  3. ಆಸೆ ಹುಟ್ಟಿಸು; ಆಮಿಷ ತೋರಿಸು; ಹುಟ್ಟಿಸಿದ ಆಸೆಯನ್ನು ತೃಪ್ತಿಗೊಳಿಸಲು ನಿರಾಕರಿಸಿದರೂ (ಮುಖ್ಯವಾಗಿ ಲೈಂಗಿಕ) ಕಾಮನೆ ಕೆರಳಿಸು.
  4. (ಉಣ್ಣೆ, ಸೆಬಉ, ಮೊದಲಾದವನ್ನು) ಹಿಂಜು; ಎಕ್ಕು; ಹಿಕ್ಕು; ಬಾಚು.
  5. (ಬಟ್ಟೆ ಮೊದಲಾದವನ್ನು ಗುಂಜೆಬ್ಬಿಸಲು) (ಟೇಸಲ್‍ ಗಿಡದ ಮುಳ್ಳುಹೂ ತಲೆಗಳಿಂದ) ಬಾಚು.
ಪದಗುಚ್ಛ

tease out ಹೆಕ್ಕಿ ವಿಂಗಡಿಸು; ಸಿಕ್ಕು ಬಿಡಿಸು (ರೂಪಕವಾಗಿ ಸಹ).

See also 1tease
2tease ಟೀಸ್‍
ನಾಮವಾಚಕ
  1. (ಆಡುಮಾತು) ಕೀಟಲೆಗಾರ; (ಇತರರನ್ನು) ಚುಡಾಯಿಸುವವನು.
  2. ಚುಡಾಯಿಸುವುದು; ರೇಗಿಸುವುದು.