See also 2team
1team ಟೀಮ್‍
ನಾಮವಾಚಕ
  1. (ಹೇರುಪ್ರಾಣಿಗಳ) ಜೊತೆ; ಜೋಡಿ; ತಂಡ; ಒಟ್ಟಿಗೆ ಹೂಡಿದ ಎರಡು ಯಾ ಹೆಚ್ಚು ಹೇರುಪ್ರಾಣಿಗಳು.
  2. ಒಟ್ಟಿಗೆ ಹೂಡಿದ ಎರಡು ಯಾ ಹೆಚ್ಚು ಸಂಖ್ಯೆಯ ಹೇರುಪ್ರಾಣಿಗಳು ಮತ್ತು ಅವು ಎಳೆಯುವ ಗಾಡಿ, ವಾಹನ.
  3. (ಆಟಗಳಲ್ಲಿ) ತಂಡ; ಪಕ್ಷ; ಒಂದು ಪಕ್ಷದ ಆಟಗಾರರು: cricket team ಕ್ರಿಕೆಟ್‍ ತಂಡ.
  4. ಉದ್ಯೋಗಿಗಳ ತಂಡ; ಒಟ್ಟಿಗೆ ಕೆಲಸ ಮಾಡುವವರ ತಂಡ.
See also 1team
2team ಟೀಮ್‍
ಸಕರ್ಮಕ ಕ್ರಿಯಾಪದ
  1. (ಕುದುರೆ ಮೊದಲಾದವನ್ನು) ಜೊತೆಯಾಗಿ ಹೂಡು; ತಂಡವಾಗಿ ಹೂಡು.
  2. ತಂಡದಲ್ಲಿ ಒಬ್ಬನನ್ನಾಗಿ ಯಾ ಒಂದಾಗಿ ಸೇರಿಸು.
ಅಕರ್ಮಕ ಕ್ರಿಯಾಪದ

ತಂಡದಲ್ಲಿ ಒಬ್ಬನಾಗಿ ಯಾ ಒಂದಾಗಿ ಸೇರು, ಕೂಡು.

ಪದಗುಚ್ಛ

team up

  1. ತಂಡದಲ್ಲಿ ಒಂದಾಗಿ ಕೂಡಿಸು, ಸೇರಿಸು.
  2. ತಂಡದಲ್ಲಿ ಒಂದಾಗಿ ಸೇರು, ಕೂಡಿಕೊ.