See also 2tea
1tea ಟೀ
ನಾಮವಾಚಕ
  1. ಟೀ, ಚಾ, ಚಹಾ–ಗಿಡ.
  2. (ಒಣಗಿದ) ಟೀ ಸೊಪ್ಪು, ಎಲೆ.
  3. ಟೀ ಕಷಾಯ; ಚಹ; ಚಾ.
  4. ಇತರ ಎಲೆಗಳಿಂದ ಯಾ ಪದಾರ್ಥಗಳಿಂದ ಮಾಡಿದ ಟೀ ಕಷಾಯದಂತಹ ಪಾನೀಯ: camomile tea; beef tea.
    1. ಮಧ್ಯಾಹ್ನದ ಚಹಾಪಾನ; ಮಧ್ಯಾಹ್ನ ಚಹದೊಂದಿಗೆ ತೆಗೆದುಕೊಳ್ಳುವ (ಬ್ರೆಡ್ಡು, ಕೇಕುಗಳು, ಮೊದಲಾದವುಗಳುಳ್ಳ) ಲಘು ಉಪಾಹಾರ, ಅಲ್ಪಾಹಾರ.
    2. (ಬ್ರಿಟಿಷ್‍ ಪ್ರಯೋಗ) (ಚಹದೊಡನೆ ತೆಗೆದುಕೊಳ್ಳುವ, ಬೇಯಿಸಿದ ಮಾಂಸ ಮೊದಲಾದವುಗಳಿಂದ ಕೂಡಿದ) ಸಂಜೆಯ ಊಟ.
ಪದಗುಚ್ಛ
  1. early morning tea ಬೆಳಿಗ್ಗೆಯ ಚಹಾಪಾನ; ಬೆಳಿಗ್ಗೆ ಹಾಸಿಗೆಯಿಂದ ಏಳುವ ಮೊದಲು ಸೇವಿಸುವ ಚಹ.
  2. high tea = tea (5b).
  3. not my cup of tea ನನಗೆ ಸರಿಬೀಳದ, ಇಷ್ಟವಿಲ್ಲದ ವಸ್ತು; ನಾನೊಲ್ಲೆ.
  4. tea and sympathy (ಆಡುಮಾತು) ಸ್ನೇಹಾನುಕಂಪೆ; ತೊಂದರೆಯಲ್ಲಿರುವ ವ್ಯಕ್ತಿಯನ್ನು ಸ್ನೇಹಾದರದಿಂದ ಕಾಣುವುದು.
See also 1tea
2tea ಟೀ
ಕ್ರಿಯಾಪದ
ಸಕರ್ಮಕ ಕ್ರಿಯಾಪದ

ಚಹಾ ಕೊಡು.

ಅಕರ್ಮಕ ಕ್ರಿಯಾಪದ

ಚಹಾ ಸೇವಿಸು; ಟೀ ಕುಡಿ.