taster ಟೇಸ್ಟರ್‍
ನಾಮವಾಚಕ
  1. ಆಸ್ವಾದಕ; ರುಚಿಪರೀಕ್ಷಕ:
    1. (ಟೀ, ಮದ್ಯ, ಮೊದಲಾದವನ್ನು) ರುಚಿ ನೋಡಲು ನೇಮಿತನಾದವನು.
    2. ಆಹಾರ, ಪಾನೀಯಗಳನ್ನು ರುಚಿನೋಡಿ ಪರೀಕ್ಷಿಸಲು ನೇಮಕವಾದವನು.
  2. ರುಚಿಬಟ್ಟಲು; ಮದ್ಯ ಪರೀಕ್ಷಕನ ಸಣ್ಣಬಟ್ಟಲು.
  3. ಆಹಾರ ಪರೀಕ್ಷಕ; ವಿಷಪ್ರಾಶನ ಮೊದಲಾದ ಅಪಾಯ ನಿವಾರಿಸಲು, ರಾಜರು, ಸರ್ವಾಧಿಕಾರಿಗಳು, ಮೊದಲಾದವರು ತಮಗಾಗಿ ತಯಾರಾದ ಆಹಾರವನ್ನು ತಾವು ತಿನ್ನುವ ಮೊದಲೇ ರುಚಿನೋಡಿ ಪರೀಕ್ಷಿಸಲು ನೇಮಿಸಿದ ಆಹಾರ ಪರೀಕ್ಷಕರು.
  4. ರುಚಿ ಚಮಚ; ಗಿಣ್ಣಿನಿಂದ ‘ಸ್ಯಾಂಪಲ್‍’ ತುಂಡನ್ನು ಕತ್ತರಿಸಿ ಪರೀಕ್ಷಿಸಲು ಬಳಸುವ ಸಲಕರಣೆ.