See also 2tame
1tame ಟೇಮ್‍
ಸಕರ್ಮಕ ಕ್ರಿಯಾಪದ
  1. (ಕಾಡುಪ್ರಾಣಿ, ಹಕ್ಕಿ, ಮೊದಲಾದವನ್ನು) ಪಳಗಿಸು; ಸಾಧುಮಾಡು.
  2. (ವ್ಯಕ್ತಿಯನ್ನು ಯಾ ಅವನ ಕೆಚ್ಚು, ಉತ್ಸಾಹ, ಮೊದಲಾದವನ್ನು) ಇಳಿಸು; ಕುಗ್ಗಿಸು; ಮುರಿ; ದಮನಮಾಡು.
  3. (ಕಾಡು, ನೀರು, ಮೊದಲಾದವನ್ನು) ನಿಯಂತ್ರಿಸು; ನಿಯಂತ್ರಣಕ್ಕೊಳಪಡಿಸು; ಉಪಯೋಗಕ್ಕೆ ಬರುವಂತೆ, ಪ್ರಯೋಜನಕ್ಕೆ ಆಗುವಂತೆ ಮಾಡು.
    1. (ಭೂಮಿಯನ್ನು) ವ್ಯವಸಾಯಮಾಡು; ಸಾಗುವಳಿ ಮಾಡು; ಸಾಗುವಳಿಗೆ–ತರು, ಒಳಪಡಿಸು.
    2. (ಗಿಡವನ್ನು) ಬೆಳೆಸು; ಸಾಕು.
See also 1tame
2tame ಟೇಮ್‍
ಗುಣವಾಚಕ
  1. (ಸಾಕಿ) ಪಳಗಿಸಿದ; ಸಾಧುವಾದ: a tame bear ಪಳಗಿಸಿದ ಕರಡಿ.
  2. (ವ್ಯಕ್ತಿಯ ವಿಷಯದಲ್ಲಿ ಹಾಸ್ಯ ಪ್ರಯೋಗ) ಸಾಧು; ಹೇಳಿದಂತೆ ಕೇಳುವ ಮತ್ತು ಸ್ವಂತ ಕೆಲಸಕ್ಕೆ ಒದಗತಕ್ಕವನೆಂದು ಹತ್ತಿರ ಇಟ್ಟುಕೊಂಡ.
  3. ನಿಸ್ಸತ್ತ್ವದ; ನಿಸ್ಸಾರ; ಸಪ್ಪೆ: a very tame party ಬಹಳ ನಿಸ್ಸಾರವಾದ ಕೂಟ. a tame description ಸಪ್ಪೆ ವರ್ಣನೆ.
  4. (ವ್ಯಕ್ತಿಯ ವಿಷಯದಲ್ಲಿ) ತಗ್ಗಿ ನಡೆಯುವ; ಮೆದುಗಲಿಯಾದ; ನಮ್ರ.
    1. (ಅಮೆರಿಕನ್‍ ಪ್ರಯೋಗ) (ಭೂಮಿಯ ವಿಷಯದಲ್ಲಿ) ಸಾಗುವಳಿ ಮಾಡಿದ; ಸಾಗುವಳಿಗೆ ತಂದ.
    2. (ಗಿಡದ ವಿಷಯದಲ್ಲಿ) ಬೆಳೆಸಿದ; ಸಾಕಿದ.