See also 2tambour
1tambour ಟ್ಯಾಂಬಉಅರ್‍
ನಾಮವಾಚಕ
  1. ಒಂದು ಬಗೆಯ ತಮಟೆ ಯಾ ಸಣ್ಣ ನಗಾರಿ ಯಾ ಮದ್ದಲೆ.
    1. ಕಸೂತಿ ಚೌಕಟ್ಟು; ಕಸೂತಿ ಅಲಂಕಾರ ಮಾಡುವಾಗ ರೇಷ್ಮೆಬಟ್ಟೆ ಮೊದಲಾದವನ್ನು ಎಳೆದು ಹರಡಿ ಹಿಡಿದು ಕೊಳ್ಳುವ ದುಂಡನೆಯ ಚೌಕಟ್ಟು.
    2. ಈ ರೀತಿ ಮಾಡಿದ ಕಸೂತಿ ಯಾ ಕಸೂತಿ ಬಟ್ಟೆ.
  2. (ವಾಸ್ತುಶಿಲ್ಪ) ದಿಂಡುಕಲ್ಲು; ಕಂಬದ ದಿಂಡಿನಲ್ಲಿನ ಉರುಳೆಯಾಕಾರದ ಭಾಗ.
  3. (ವಾಸ್ತುಶಿಲ್ಪ) (ಚರ್ಚ್‍ಗಳ ಮುಮಂಪ ಮೊದಲಾದವುಗಳಲ್ಲಿ ಗಾಳಿ ತಡೆಯಲು ಮಾಡಿರುವ) ಚಾವಣಿ ಮತ್ತು ಮಡಿಸುವ ಬಾಗಿಲುಗಳಿರುವ ಮೊಗಸಾಲೆ.
  4. (ವಾಸ್ತುಶಿಲ್ಪ) ವರ್ತುಲದಿಂಡು; ವಿವಿಧ ಕಟ್ಟಡಗಳಲ್ಲಿನ ವೃತ್ತಾಕಾರದ ಭಾಗ.
  5. ಮದ್ದಲೆ ಮೀನು; ಮದ್ದಲೆ ಆಕಾರದ ಯಾ ಮದ್ದಲೆ ಶಬ್ದ ಮಾಡುವ ಹಲವು ಬಗೆಯ ಮೀನು.
  6. ‘ಹೈವ್ಸ್‍’ ಎಂಬ ಚೆಂಡಾಟದ ಕ್ರೀಡಾಂಗಣದ ಓರೆಗೋಡೆ ಯಾ ಚಾಚುಗೋಡೆ.
See also 1tambour
2tambour ಟ್ಯಾಂಬಉಅರ್‍
ಸಕರ್ಮಕ ಕ್ರಿಯಾಪದ

(ಕಸೂತಿ ಚೌಕಟ್ಟಿನ ಮೇಲೆ ಹರಡಿಕೊಂಡು) ಕಸೂತಿಹಾಕು; ಕಸೂತಿ ಅಲಂಕಾರ ಮಾಡು ( ಅಕರ್ಮಕ ಕ್ರಿಯಾಪದ ಸಹ).