talent ಟ್ಯಾಲಂಟ್‍
ನಾಮವಾಚಕ
  1. ಪ್ರತಿಭೆ; ವಿಶೇಷ ಶಕ್ತಿ, ಸಾಮರ್ಥ್ಯ: a talent for music ಸಂಗೀತದಲ್ಲಿ ಪ್ರತಿಭೆ. he has real talent ಅವನಿಗೆ ನಿಜವಾದ ಸಾಮರ್ಥ್ಯವಿದೆ.
  2. ಅತಿಶಯ ಬಉದ್ಧಿಶಕ್ತಿ; ಮೇಧಾಶಕ್ತಿ; ಪ್ರಜ್ಞಾಶಕ್ತಿ.
  3. ಬಉದ್ಧಿಶಾಲಿ(ಗಳು); ಮೇಧಾವಿ(ಗಳು); ಪ್ರತಿಭಾನ್ವಿತ(ರು): all the talent of the country ದೇಶದ ಸಮಸ್ತ ಪ್ರತಿಭಾವಂತ ಜನ. he is a real talent ಅವನು ನಿಜವಾದ ಮೇಧಾವಿ. plenty of local talent ಯಥೇಚ್ಫವಾದ ದೇಶೀಯ ಪ್ರತಿಭೆ (ಪ್ರತಿಭಾವಂತರು).
  4. (ಪ್ರಾಚೀನ ಅಸ್ಸಿರಿಯನರು, ಗ್ರೀಕರು, ರೋಮನರು, ಮೊದಲಾದವರಲ್ಲಿ ಬಳಕೆಯಲ್ಲಿದ್ದ) ಒಂದು ತೂಕ ಮತ್ತು ನಾಣ್ಯಮಾನ.
  5. (ಆಡುಮಾತು) ಲೈಂಗಿಕತೃಪ್ತಿಯ ಭರವಸೆಯ ದೃಷ್ಟಿಯಿಂದ ಪರಿಗಣಿಸಿದ ಭಿನ್ನಲಿಂಗದ ವ್ಯಕ್ತಿಗಳು; ಲೈಂಗಿಕ ತೃಪ್ತಿದಾಯಕ ಸ್ತ್ರೀಯರು ಯಾ ಪುರುಷರು.