tale ಟೇಲ್‍
ನಾಮವಾಚಕ
  1. ಕಥೆ; ಕತೆ:
    1. (ನಿಜವಾದ, ನಿಜವೆಂದು ಹೇಳಲಾದ ಯಾ ಮುಖ್ಯವಾಗಿ ಕಲ್ಪಿತವಾದ ಮತ್ತು ಕಲ್ಪನಾಶಕ್ತಿಯಿಂದ ನಿರೂಪಿತವಾದ) ಸಂಗತಿ, ಘಟನೆ, ಮೊದಲಾದವುಗಳ ಕಥನ.
    2. ಸುಳ್ಳು ಕಥೆ; ವದಂತಿ; ಕಟ್ಟು, ಕಲ್ಪಿತ, ದಂತ–ಕಥೆ; ಅನೇಕ ವೇಳೆ ದುರುದ್ದೇಶದಿಂದ ಯಾ ನಂಬಿ ಗುಟ್ಟಾಗಿ ಹೇಳಿದ್ದನ್ನು ನಂಬಿಕೆ ಮುರಿದು ಹೇಳಿದ, ನಿಜವೆನ್ನಲಾದ ಸಂಗತಿಯ ವರದಿ: all sorts of tales will get about ಎಲ್ಲ ಬಗೆಯ ಸುಳ್ಳು ಕತೆಗಳೂ ಹರಡುತ್ತವೆ.
  2. (ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ಒಟ್ಟು ಲೆಕ್ಕ, ಸಂಖ್ಯೆ; ಮೊತ್ತ: the tale is complete ಅದರ ಲೆಕ್ಕ ಮುಗಿಯಿತು; ಅದನ್ನು ಎಣಿಸಿದ್ದಾಯಿತು.
ಪದಗುಚ್ಛ
  1. $^1$old wives’tale.
  2. shepherd tells his tale ಕುರುಬ ಕುರಿಗಳೆಷ್ಟಿವೆ ಎಂದು ಎಣಿಸುತ್ತಾನೆ.
  3. tale of a tub ಕಟ್ಟುಕತೆ; ಕಾಗೆ ಗುಬ್ಬಿ ಕಥೆ; ನಂಬಲಾಗದ ಕಥೆ.
  4. tell tales (out of school) (ಮುಖ್ಯವಾಗಿ ದುರುದ್ದೇಶದಿಂದ) ಗುಟ್ಟು ಸಂಗತಿಯನ್ನೆಲ್ಲ ಹೊರಗೆಡವು; ಚಾಡಿ ಹೇಳು.