tactile ಟ್ಯಾಕ್ಟೈಲ್‍
ಗುಣವಾಚಕ
  1. ಸ್ಪಾರ್ಶ:
    1. ಸ್ಪರ್ಶದ; ಸ್ಪರ್ಶೇಂದ್ರಿಯದ; ಸ್ಪರ್ಶೇಂದ್ರಿಯಕ್ಕೆ ಸಂಬಂಧಿಸಿದ: tactile impression ಸ್ಪರ್ಶದಿಂದ ಗ್ರಹಿಸಿದ ಭಾವನೆ.
    2. ಸ್ಪರ್ಶ–ಗ್ರಾಹ್ಯ, ವೇದ್ಯ; ಸ್ಪರ್ಶದಿಂದ ಗ್ರಹಿಸಿದ; ಮುಟ್ಟಿತಿಳಿಯುವ.
    3. ಸ್ಪಶ್ಯ; ಮುಟ್ಟಲಾಗುವ; ಸ್ಪರ್ಶನೀಯ: tactile qualities ಸ್ಪಶ್ಯ ಗುಣಗಳು.
  2. (ಕಲೆ) (ವರ್ಣಚಿತ್ರಣದಲ್ಲಿ) ಘನರೂಪದ; ಘನಾಕಾರದ ಪರಿಣಾಮವುಂಟು ಮಾಡುವ, ಅದಕ್ಕೆ ಸಂಬಂಧಿಸಿದ; ತ್ರಿವಿಮಿತೀಯ; ಮೂರು ಆಯಾಮದ: tactile values ಘನರೂಪದ ಗುಣಗಳು.