tactical ಟ್ಯಾಕ್ಟಿಕಲ್‍
ಗುಣವಾಚಕ
  1. ಯುದ್ಧತಂತ್ರದ; ಸೈನ್ಯ ಮೊದಲಾದವನ್ನು ತಕ್ಕ ರೀತಿಯಲ್ಲಿ ನಿಯೋಜಿಸಿ ಸಂಚಾಲಿಸುವ, ವ್ಯೂಹವಾಗಿ ನಿಲ್ಲಿಸುವ ಕಲೆಯ ಯಾ ಅದಕ್ಕೆ ಸಂಬಂಧಿಸಿದ.
  2. ಯುಕ್ತಿಯಿಂದ ನಿಯೋಜಿಸಿದ; ತಂತ್ರೋಪಾಯದ; ತಂತ್ರದ.
  3. (ಬಾಂಬಉದಾಳಿ ಯಾ ಆಯುಧಗಳ ವಿಷಯದಲ್ಲಿ) ತಕ್ಷಣದ; ಸೈನ್ಯದ ಯಾ ನೌಕಾಸೈನ್ಯದ ಕಾರ್ಯಾಚರಣೆಗಳಿಗೆ ಬೆಂಬಲವಾಗಿ ಕೂಡಲೇ ಮಾಡುವ ಯಾ ಈ ಕಾರ್ಯಾಚರಣೆಗಳಲ್ಲಿ ಬಳಸುವ.
  4. (ಮತದಾನದ ಯಾ ವೋಟಿನ ವಿಷಯದಲ್ಲಿ) ಅಡ್ಡಿಹೂಟದ; ತಡೆಹಂಚಿಕೆಯ; ಪ್ರತಿರೋಧ, ಪ್ರತಿಬಂಧಕ–ತಂತ್ರದ; ಅತ್ಯಂತ ಪ್ರಬಲ ಅಭ್ಯರ್ಥಿಯನ್ನು ಗೆಲ್ಲದಂತೆ ತಡೆಯಲು ನಂತರದ ಪ್ರಬಲ ಅಭ್ಯರ್ಥಿಯನ್ನು ಬೆಂಬಲಿಸುವ ಉದ್ದೇಶ ವುಳ್ಳ.