subtlety ಸಟ್‍ಲ್ಟಿ
ನಾಮವಾಚಕ
(ಬಹುವಚನ subleties).
  1. ವಿರಳತೆ; (ದ್ರವ್ಯರಾಶಿ ಸಾಂದ್ರವಾಗಿಲ್ಲದ ಕಾರಣ) ತೆಳ್ಳಗಿರುವಿಕೆ; ತೆಳುವಾಗಿರುವಿಕೆ:the subtlety of air ವಾಯುವಿನ ವಿರಳತೆ.
  2. ವ್ಯಾಪನಶೀಲತೆ; (ಸೂಕ್ಷ್ಮವಾಗಿರುವುದರಿಂದ) ಹರಡಿಕೊಳ್ಳುವಿಕೆ: the subtlety of the smoke ಆ ಹೊಗೆಯ ಹರಡಿಕೆ.
  3. ಸೂಕ್ಷ ತೆ: the subtlety of art ಕಲಾ ಸೂಕ್ಷ ತೆ.
  4. (ಬಉದ್ಧಿಯ) ಸೂಕ್ಷ ಗ್ರಾಹಕತೆ; ಕುಶಾಗ್ರತೆ; ತೀಕ್ಷ ತೆ: the subtlety of his intellect ಆತನ ಬಉದ್ಧಿಯ ಕುಶಾಗ್ರತೆ.
  5. ಕುಶಲತೆ; ಚಮತ್ಕಾರ: the subtlety of the poet’s fancy ಈ ಕವಿಯ ಕಲ್ಪನೆಯ ಚಮತ್ಕಾರ.
  6. ಕೃತ್ರಿಮ; ಕುಯುಕ್ತಿ; ಕುತಂತ್ರ; ಕಪಟ; ಮೋಸ: the laws were perverted by subtlety ಕಾನೂನುಗಳನ್ನು ಕುತಂತ್ರದಿಂದ ವಿಕೃತಗೊಳಿಸಲಾಯಿತು; ಕಾನೂನುಗಳು ಕುಯುಕ್ತಿಯಿಂದ ವಿಕೃತವಾದವು.
  7. ಸೂಕ್ಷ್ಮಾತಿಸೂಕ್ಷ ತೆ; ನವಿರಾದ ಭೇದ: the subtlety of medieval logic ಮಧ್ಯಯುಗದ ತರ್ಕದ ಸೂಕ್ಷ್ಮಾತಿಸೂಕ್ಷ್ಮತೆ.
  8. ಅತಿ ಸೂಕ್ಷ ತರ್ಕ.