See also 2sterling
1sterling ಸ್ಟರ್ಲಿಂಗ್‍
ಗುಣವಾಚಕ
  1. (ನಾಣ್ಯ ಯಾ ಪ್ರಶಸ್ತ ಲೋಹದ ವಿಷಯದಲ್ಲಿ) ಚೊಕ್ಕ; ಅಚ್ಚ; ಅಪ್ಪಟ; ಮೌಲ್ಯ ಮತ್ತು ಶುದ್ಧತೆಯಲ್ಲಿ ನಿಗದಿಯಾದ ಪ್ರಮಾಣದ.
  2. ನಾಣ್ಯವಾದ; ಗಟ್ಟಿಯಾದ; ಯಥಾರ್ಥವಾದ; ನಿಜವಾದ ಯೋಗ್ಯತೆ ಉಳ್ಳ; ವಿಶ್ವಸನೀಯವಾದ; ನೆಚ್ಚಬಹುದಾದ; ಪ್ರಾಮಾಣಿಕವಾದ: a sterling fellow ನಾಣ್ಯವಾದ ವ್ಯಕ್ತಿ; ಗಣ್ಯತೆ, ಯೋಗ್ಯತೆಗಳುಳ್ಳ ವ್ಯಕ್ತಿ. sterling work ವಿಶ್ವಸನೀಯವಾದ ಕೆಲಸ. sterling sense ಗಟ್ಟಿ ವಿವೇಕ. sterling qualities ಉತ್ತಮ ಗುಣಗಳು. sterling character ಪ್ರಾಮಾಣಿಕವಾದ ನಡತೆ.
  3. ಸ್ಟರ್ಲಿಂಗ್‍ನ; ಬ್ರಿಟಿಷ್‍ ನಾಣ್ಯಮಾನದ ಯಾ ಹಣದ; ಬ್ರಿಟಿಷ್‍ ಹಣದಲ್ಲಿ ಯಾ ನಾಣ್ಯಮಾನದಲ್ಲಿ ಮೌಲ್ಯ ನಿರ್ಧರಿಸಿದ: pound sterling ಪೌಂಡ್‍ ನಾಣ್ಯಮಾನ.
See also 1sterling
2sterling ಸ್ಟರ್ಲಿಂಗ್‍
ನಾಮವಾಚಕ

ಸ್ಟರ್ಲಿಂಗ್‍ – ನಾಣ್ಯ ಯಾ ನಾಣ್ಯಮಾನ; (ಅನ್ಯದೇಶಗಳ ನಾಣ್ಯಕ್ಕೆ ಯಾ ನಾಣ್ಯ ವ್ಯವಸ್ಥೆಗೆ ಭಿನ್ನವಾಗಿ) ಬ್ರಿಟಿಷ್‍ ನಾಣ್ಯ ಯಾ ನಾಣ್ಯ ವ್ಯವಸ್ಥೆ: pound sterling ಪೌಂಡ್‍ ಸ್ಟರ್ಲಿಂಗ್‍; ಬ್ರಿಟನ್ನಿನ ಪೌಂಡು ನಾಣ್ಯ.