See also 2stag
1stag ಸ್ಟಾಗ್‍
ನಾಮವಾಚಕ
  1. (ಮುಖ್ಯವಾಗಿ ಕವಲು ಕೊಂಬಉಗಳುಳ್ಳ) ದೊಡ್ಡ ಗಂಡು ಜಿಂಕೆ; ಕಡವೆ; ಸಾರ(ಂ)ಗ; ಹರಿಣ.
  2. (ಸ್ಟಾಕ್‍ ಎಕ್ಸ್‍ಚೇಂಜ್‍) ಸಾರಂಗ; ಲಾಭಕ್ಕಾಗಿ ಒಡನೆಯೇ ಮಾರುವ ಉದ್ದೇಶದಿಂದ ಹೊಸ ಕಂಪೆನಿಯ ಷೇರುಗಳಿಗೆ ಅರ್ಜಿ ಹಾಕುವವನು.
  3. ಒಂಟಿ ಅತಿಥಿ; ಸಂತೋಷಕೂಟ ಮತ್ತು ಸಮಾರಂಭಗಳಿಗೆ (ಜತೆಯಲ್ಲಿ ಹೆಂಗಸರಿಲ್ಲದೆ) ಒಂಟಿಯಾಗಿ ಬರುವವನು.
See also 1stag
2stag ಸ್ಟಾಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ stagged; ವರ್ತಮಾನ ಕೃದಂತ stagging).

(ಬ್ರಿಟಿಷ್‍ ಪ್ರಯೋಗ) (ಸ್ಟಾಕ್‍ ಎಕ್ಸ್‍ಚೇಂಜ್‍) ಸಾರಂಗ ವ್ಯವಹಾರದಲ್ಲಿ ತೊಡಗು; ಲಾಭಕ್ಕಾಗಿ ಕೂಡಲೇ ಮಾರುವ ಉದ್ದೇಶದಿಂದ ಹೊಸ ಕಂಪನಿಯ ಷೇರುಗಳಲ್ಲಿ ವ್ಯವಹರಿಸು.