smoky ಸ್ಮೋಕಿ
ಗುಣವಾಚಕ
( ತರರೂಪ smokier, ತಮರೂಪ smokiest).
  1. ಹೊಗೆ – ಬಿಡುವ, ಕಾರುವ: smoky fire ಹೊಗೆ ಕಾರುವ – ಬೆಂಕಿ, ಉರಿ.
  2. ಹೊಗೆ – ತುಂಬಿದ, ಕವಿದ; ಧೂಮಮಯ; ಧೂಮಾವೃತ: smoky room ಹೊಗೆ ತುಂಬಿದ ಕೋಣೆ.
  3. ಹೊಗೆ – ಕಟ್ಟಿದ, ಮುಸುಕಿದ; ಹೊಗೆಯಿಂದ ಮರೆಯಾದ.
  4. ಹೊಗೆಯಂಥ; ಹೊಗೆ ಬಣ್ಣದ; ಧೂಮ್ರವರ್ಣದ: smoky glass ಹೊಗೆ ಬಣ್ಣದ ಗಾಜು.
  5. ಹೊಗೆ ಹಿಡಿದಂತಿರುವ; (ಹೊಗೆಯಿಂದ ಆಗುವಂತೆ) ಅಸ್ಪಷ್ಟವಾಗಿರುವ; ಮಾಸಲಾಗಿರುವ; ಮಸುಕಾಗಿರುವ.
  6. ಹೊಗೆ ವಾಸನೆಯ ಯಾ ರುಚಿಯ; ಹೊಗೆಯಾಡಿಸಿದ ಆಹಾರದಂತೆ ವಾಸನೆ ಬೀರುವ ಯಾ ರುಚಿಯಿರುವ: smoky bacon ಹೊಗೆ ರುಚಿಯ ಹಂದಿಮಾಂಸ.