secretary ಸೆಕ್ರಿಟರಿ, ಸೆಕ್ರಟ್ರಿ
ನಾಮವಾಚಕ
(ಬಹುವಚನ secretaries).
  1. ಕಾರ್ಯದರ್ಶಿ; ಸೆಕ್ರೆಟರಿ:
    1. (ಪತ್ರ ವ್ಯವಹಾರ, ಲೇಖನಕಾರ್ಯ, ಸುದ್ದಿ ಸಮಾಚಾರಗಳನ್ನು ಕಲೆಹಾಕಿ ತನಗೆ ತಿಳಿಸುವುದು, ತನ್ನ ರಹಸ್ಯಗಳನ್ನರಿತು ನಡೆದುಕೊಳ್ಳುವುದು, ಮೊದಲಾದವುಗಳಲ್ಲಿ ಸಹಾಯಕನಾಗಿರಲು ನೇಮಿಸಿಕೊಂಡ, ವರಿಷ್ಠ ವ್ಯಕ್ತಿಯ) (ಆಪ್ತ ) ಸಹಾಯಕ, ಅಧಿಕಾರಿ.
    2. (ಯಾವುದೇ ಸಂಘ, ಸಮಾಜ, ಕೈಗಾರಿಕೆ, ವಾಣಿಜ್ಯ ಸಂಸ್ಥೆ, ಕಾರ್ಪೊರೇಷನ್‍, ಮೊದಲಾದವುಗಳ ಪತ್ರವ್ಯವಹಾರ ನಡೆಸುವುದು, ಕಾಗದ ಪತ್ರಗಳನ್ನು ಸುರಕ್ಷಿತವಾಗಿಡುವುದು, ಕಾರುಬಾರು ನಡೆಸುವುದು, ಮೊದಲಾದವಕ್ಕಾಗಿ ನೇಮಕಗೊಂಡ) ಅಧಿಕಾರಿ.
    3. (United Kingdom ನಲ್ಲಿ) (ಸರ್ಕಾರ, ಮಂತ್ರಿ, ರಾಯಭಾರಿ, ಮೊದಲಾದವರಿಗೆ) ಪ್ರಧಾನ ಸಹಾಯಕನಾದ ಅಧಿಕಾರಿ. (ಮುದ್ರಣ) ಹಸ್ತಾಕ್ಷರದಚ್ಚು; ಕೈಬರವಣಿಗೆಯನ್ನೇ ಅನುಕರಿಸುವ ಅಚ್ಚಿನ ಮೊಳೆ.
ಪದಗುಚ್ಛ

Parliamentary Secretary (United Kingdomನಲ್ಲಿ) (ಪಾರ್ಲಿಮೆಂಟಿನ ಸದಸ್ಯನೂ ಸರ್ಕಾರದ ಯಾವುದೇ ಖಾತೆಗೆ ನೇಮಕನಾದವನೂ ಆದ) ಪಾರ್ಲಿಮೆಂಟರಿ ಸೆಕ್ರೆಟರಿ; ಶಾಸನಸಭಾ ಕಾರ್ಯದರ್ಶಿ.