rustle ರಸಲ್‍
ಸಕರ್ಮಕ ಕ್ರಿಯಾಪದ
  1. (ಅಲುಗಿಸಿ, ಅಳ್ಳಾಡಿಸಿ ತರಗೆಲೆಗಳಂತೆ) ಮರ್ಮರಗುಟ್ಟಿಸು.
  2. (ಆಡುಮಾತು) ಶ್ರಮಪಟ್ಟು ಗಳಿಸು ಯಾ ವ್ಯವಹರಿಸು.
  3. (ದನಕರುಗಳನ್ನು, ಕುದುರೆಗಳನ್ನು) ಕದಿ; ಕಳವುಮಾಡು ( ಅಕರ್ಮಕ ಕ್ರಿಯಾಪದ ಸಹ).
ಅಕರ್ಮಕ ಕ್ರಿಯಾಪದ
  1. (ತರಗೆಲೆಯಂತೆ, ಮಳೆ ಹೊಯ್ಯುವಂತೆ, ರೇಷ್ಮೆ ಉಡುಪುಗಳನ್ನು ಧರಿಸಿ ಓಡಾಡುವಾಗ ಆಗುವಂತೆ) ಮರ್ಮರ ಶಬ್ಬಮಾಡು.
  2. (ಉಡುಪು) ಮುರ ಮುರ ಶಬ್ದ ಮಾಡುವಂತೆ – ನಡೆ, ಸಾಗು, ಹೋಗು.
  3. (ಅಮೆರಿಕನ್‍ ಪ್ರಯೋಗ) (ಆಡುಮಾತು) ಆತುರಪಡು; ಗಡಿಬಿಡಿಮಾಡು.
ಪದಗುಚ್ಛ

rustle up (ಆಡುಮಾತು)

  1. ಹುಡುಕಾಡು; ಹುಡುಕಿ ಪಡೆ.
  2. ಅಗತ್ಯವಿದ್ದಾಗ ತರು, ಮುಂದಿಡು.