See also 2rustic
1rustic ರಸ್ಟಿಕ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಹಳ್ಳಿಯ; ಹಳ್ಳಿಗಾಡಿನ; ಗ್ರಾಮ್ಯ.
  2. ಹಳ್ಳಿಯವರಂತಿರುವ; ಹಳ್ಳಿ ಜನರ ನಡೆ ನುಡಿಯುಳ್ಳ; ರೈತರ ಲಕ್ಷಣವುಳ್ಳ; ಗ್ರಾಮೀಣ.
  3. ನಯನಾಜೂಕಿಲ್ಲದ; ಒಡ್ಡೊಡ್ಡಾದ; ಒರಟೊರಟಾದ; ಅಸಂಸ್ಕೃತ; ಅಪರಿಷ್ಕೃತ.
  4. ಒರಟು ತಯಾರಿಕೆಯ; ಒಡ್ಡು ಕೆಲಸಗಾರಿಕೆಯ; ಕಂತ್ರಿ: rustic bridge (ಸಮರಿರದ ಕೊಂಬೆ, ಕೊರಡು ಮೊದಲಾದವುಗಳಿಂದ ಮಾಡಿದ) ಒರಟು ಸೇತುವೆ; ಕಂತ್ರಿ ಸೇತುವೆ.
  5. (ಲಿಪಿ) ಕೋಚುಕೋಚಾದ; ಸಮರೂಪವಿಲ್ಲದ; ವಕ್ರವಕ್ರವಾದ.
  6. (ವಾಸ್ತುಶಿಲ್ಪ) ಒರಟು; ತಕವಾಗಿ ಒರಟುಮಾಡಿದ ಯಾ ಒರಟೊರಟಾಗಿಯೇ ಬಿಟ್ಟ ಯಾ ಸಂದುಗಳನ್ನು (ಸೇರುವೆಗಳನ್ನು) ಆಳವಾಗಿ ಕುಗ್ಗಿಸಿರುವ ಯಾ ಸಂದುಗಳು ವಾಲಿರುವಂಥ ಮೇಲ್ಮೈಯುಳ್ಳ.
See also 1rustic
2rustic ರಸ್ಟಿಕ್‍
ನಾಮವಾಚಕ
  1. ಹಳ್ಳಿಗ; ಗಾವಿಲ; ಹಳ್ಳಿಗಾಡಿನವನು; ಗ್ರಾಮವಾಸಿ.
  2. ರೈತ; ಬೇಸಾಯಗಾರ.
  3. ನಯನಾಜೂಕಿಲ್ಲದವ; ಅನಾಗರಿಕ.