See also 2running
1running ರನಿಂಗ್‍
ನಾಮವಾಚಕ
  1. ಓಟ; ಪಂದ್ಯ ಮೊದಲಾದವುಗಳಲ್ಲಿ ಓಡುವುದು.
  2. ಓಡುವ ಶಕ್ತಿ, ಸಾಮರ್ಥ್ಯ: still had a lot of running left in him ಇನ್ನೂ ಓಡುವ ಶಕ್ತಿ ಅವನಲ್ಲಿ ಬಹಳ ಉಳಿದಿತ್ತು.
  3. ಪಂದ್ಯ ಮುಂದುವರಿಯುವ ರೀತಿ.
  4. ಓಟದ ಪಥದ ಸ್ಥಿತಿ; ಯಾವುದರ ಮೇಲೆ ಓಡಬೇಕಾಗಿದೆಯೋ ಅದರ ಮೇಲ್ಮೈ ಸ್ಥಿತಿ.
  5. ಹರಿಯುವ ದ್ರವದ ಪ್ರವಾಹ ಪರಿಮಾಣ.
  6. ಕಾರ್ಯನಿಯಂತ್ರಣ; ಕೆಲಸದ ಉಸ್ತುವಾರಿ, ನಿರ್ವಹಣೆ.
ಪದಗುಚ್ಛ
  1. in the running (ಸ್ಪರ್ಧಿಯ ವಿಷಯದಲ್ಲಿ) ಗೆಲ್ಲುವ ಸಂಭವ ಚೆನ್ನಾಗಿರುವ.
  2. make (or take up) the running (ಪಂದ್ಯದಲ್ಲಿ) ಮುಂದಾಳಾಗು; ಹೆಜ್ಜೆ ತೋರಿಸು; ವೇಗ ನಿರ್ಧರಿಸು (ಮಾತು, ಸಂಭಾಷಣೆ ಮೊದಲಾದವುಗಳಲ್ಲಿ ರೂಪಕವಾಗಿ ಸಹ).
  3. out of the running ಗೆಲ್ಲುವ ಸಂಭವವಿಲ್ಲದ.
See also 1running
2running ರನಿಂಗ್‍
ಗುಣವಾಚಕ
  1. (ನೀರು, ಹೊಳೆ ಮೊದಲಾದವು) ಹರಿಯುವ.
  2. ಸುರಿಯುವ; ಸುರಿಸುವ.
  3. (ಮರಳು ಯಾ ಭೂಮಿ) ಅಂಟಿಕೊಳ್ಳುವ ಗುಣವಿಲ್ಲದ; ಅಂಟಿಕೆಯಿಲ್ಲದ.
  4. (ಹುಣ್ಣು ಮೊದಲಾದವು) ಕೀವು ಸೋರುವ.
  5. (ಕಾಯಿಲೆ ಮೊದಲಾದವುಗಳ ವಿಷಯದಲ್ಲಿ) ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವ್ಯಾಪಿಸುವ, ಹರಡುವ.
  6. (ಹರಿಕಾರ ಮೊದಲಾದವರ ಕೆಲಸಕ್ಕೆ) ಓಡಲು ನೇಮಕಮಾಡಿದ.
  7. (ಮುಖ್ಯವಾಗಿ ತ್ತಿ ಯಾ ವ್ಯವಹಾರದ ಮೇಲೆ) ಬೇಗ ಬೇಗ ಸುತ್ತಾಡುವ, ತಿರುಗಾಡುವ.
  8. (ಸಸ್ಯ) ಬೇಗ ಹಬ್ಬುವ, ಹರಡುವ.
  9. (ಛಂದಸ್ಸು, ಸಂಗೀತ ಮೊದಲಾದವು) ಸರಾಗವಾದ; ಸುಗಮವಾದ; ಲಲಿತವಾದ; ವೇಗವಾದ; ದ್ರುತ.
  10. (ನೌಕಾಯಾನ) (ಯುದ್ಧಕಾಲದಲ್ಲಿ ಹಡಗು) ಬೆಂಗಾವಲಿನ ರಕ್ಷಣೆಯಿಲ್ಲದೆ ಸಂಚಾರಮಾಡುವ.
  11. ವೇಗದ; ತ್ವರೆಯ; ಓಡಿ ಮಾಡುವ.
  12. ವಿಸ್ತರಿಸಿಕೊಂಡು ಹೋಗುವ; ಎಡೆಬಿಡದೆ ಮುಂದುವರಿಯುವ.
  13. (ಅಳತೆಗಳ ವಿಷಯದಲ್ಲಿ) ಏಕ ಪರಿಮಾಣಾತ್ಮಕ.
  14. ಎಡೆಬಿಡದ; ಸಂತತ; ನಿರಂತರ; ಸತತವಾಗಿ ನಡೆದುಕೊಂಡು ಹೋಗುವ.
  15. (ಲೆಕ್ಕ ಮೊದಲಾದವುಗಳ ವಿಷಯದಲ್ಲಿ) (ನಿರ್ದಿಷ್ಟ ಯಾ ಅನಿರ್ದಿಷ್ಟ ಕಾಲ) ನಡೆದುಕೊಂಡು ಹೋಗುವ ಅವಕಾಶವುಳ್ಳ.
  16. (ಬಹುವಚನ ನಾಮಪದದ ನಂತರ ಪ್ರಯೋಗವಾದಾಗ) ಒಂದರ ಹಿಂದೊಂದು ಬರುವ; ಅನುಸರಿಸಿ ಬರುವ; ಅನುಕ್ರಮದ: happened three days running ಅನುಕ್ರಮವಾಗಿ ಮೂರು ದಿನಗಳು ನಡೆಯಿತು.
  17. ನಡೆಯುತ್ತಿರುವ; ವರ್ತಮಾನ; ಚಾಲ್ತಿಯಲ್ಲಿರುವ; ಪ್ರಚಲಿತ; ಹಾಲಿ: the running month ನಡೆಯುತ್ತಿರುವ ತಿಂಗಳು.
  18. (ಯಾಂತ್ರಿಕ ಸಾಧನಗಳಿಂದ ಯಾ ಒಂದು ಯಂತ್ರವಾಗಿ) ಸುಲಭವಾಗಿ ಯಾ ವೇಗವಾಗಿ ಓಡುವ, ಚಲಿಸುವ.
  19. (ಹಗ್ಗ ಮೊದಲಾದವುಗಳ ವಿಷಯದಲ್ಲಿ) (ಮುಖ್ಯವಾಗಿ ಬಳೆ, ಕಪ್ಪಿ ಮೊದಲಾದವುಗಳಲ್ಲಿ ಹಾದುಹೋಗುವಂತೆ) ಎಳೆದಾಗ ಸರಿಯಬಲ್ಲ.
  20. (ಕುಣಿಕೆ, ಗಂಟು ಮೊದಲಾದವುಗಳ ವಿಷಯದಲ್ಲಿ) (ಮುಖ್ಯವಾಗಿ ಯಾವುದನ್ನೇ ಬಿಗಿಯಾಗಿ ಹಿಡಿದುಕೊಳ್ಳುವಂತೆ ಸುಲಭವಾಗಿ ಸರಿಯಬಲ್ಲ.)
ಪದಗುಚ್ಛ

take a running jump (ಮುಖ್ಯವಾಗಿ ಭಾವಸೂಚಕ ಅವ್ಯಯವಾಗಿ ಪ್ರಯೋಗ) (ಅಶಿಷ್ಟ) ತೊಲಗಿಹೋಗು.