runner ರನರ್‍
ನಾಮವಾಚಕ
  1. (ಮುಖ್ಯವಾಗಿ ಪಂದ್ಯದಲ್ಲಿ) ಓಡುವವನು; ಓಡುಗ; ಓಟಗಾರ.
  2. ಜೂಜಿನ ಕುದುರೆ.
  3. (ಕ್ರಿಕೆಟ್‍) ರನ್ನರು; ಮುಖ್ಯವಾಗಿ ಗಾಯಗೊಂಡ ದಾಂಡುಗಾರನ ಬದಲು ಓಡುವವನು.
  4. (ಕಾಲ್ಚೆಂಡಾಟ) ಆಟದಲ್ಲಿರುವ ಚೆಂಡನ್ನು ಹೊಂದಿರುವ ಆಟಗಾರ.
  5. (ಹಾರದೆ) ಓಡುವ ಹಕ್ಕಿ; ನಡಗೆ ಹಕ್ಕಿ.
  6. (ಜನಪ್ರಿಯವಾದ) ಬೇಗ ಬೇಗ ಮಾರಾಟವಾಗುವ – ಸರಕು.
  7. ಓಡಾಳು; ಓಲೆಕಾರ; ಹರಿಕಾರ; ದೂತ; ಬೇಹುಗಾರ; ಹಣ ವಸೂಲಿಗಾರ.
  8. (ಬ್ಯಾಂಕು ಮೊದಲಾದವುಗಳ) ದಳ್ಳಾಳಿ; ನಿಯೋಗಿ; ಗಿರಾಕಿ ಒದಗಿಸುವವನು.
  9. (ಚರಿತ್ರೆ) ಪೊಲೀಸು ಅಧಿಕಾರಿ.
  10. ಕಳ್ಳಸಾಗಣೆಗಾರ; ಸುಂಕಗಳ್ಳ.
  11. = blockade-runner.
  12. ಬೀಸುವ ಕಲ್ಲಿನ ಸುತ್ತುಗಲ್ಲು, ತಿರುಗುವ ಕಲ್ಲು.
  13. (ನೌಕಾಯಾನ) ಓಡು ಹಗ್ಗ; ಹಾಯಿ ಹಗ್ಗ; ಒಂದು ಕೊನೆಯಲ್ಲಿ ಕೊಕ್ಕೆಹಾಕಿರುವ, ಒಂದೇ ಕಪ್ಪಿಯಲ್ಲಿ ಹಾದುಹೋಗಿರುವ ಹಗ್ಗ.
  14. ಬೇರು ಕೊಂಬೆ; ಅಂಟುಕೊಂಬೆ; ಹಬ್ಬು ತಾಳು; ಹಬ್ಬುಕಾಂಡ; ಕೆಲವು ಸಸ್ಯಗಳ ಪ್ರಧಾನ ಕಾಂಡದಿಂದ ಹೊರಟು ನೆಲವೂರಿ ಬೇರುಬಿಡುವ, ಉಪಕಾಂಡ.
  15. ಸುರುಳುಬಳ್ಳಿ ಸಸ್ಯ.
  16. (ಬ್ರಿಟಿಷ್‍ ಪ್ರಯೋಗ) (ಅವರೆ ಜಾತಿಯ) ಹಲವು ಬಗೆಯ ಹಬ್ಬು ಗಿಡ, ಮುಖ್ಯವಾಗಿ ಕಡುಗೆಂಪು ಹೂವಿನ ಅವರೆ ಜಾತಿಯ ಬಳ್ಳಿ.
  17. (ಕೋಲು, ಪಟ್ಟಿ ಮೊದಲಾದವುಗಳ ಮೇಲೆ) ಸರಿದಾಡುವ ಉಂಗುರ, ಬಳೆ ಮೊದಲಾದವು.
  18. ಜಾರು(ಮರ)ತುಂಡು; ಜಾರುಬಂಡಿ ಮೊದಲಾದವು ಜಾರುವುದಕ್ಕೆ ಅಳವಡಿಸಿದ ಮರ ಮೊದಲಾದವುಗಳ ಉದ್ದ ತುಂಡು(ಗಳಲ್ಲೊಂದು).
  19. ಜಾರುಗಾಡಿ; ಜಾರುತೋಡು; ಜಾರುದಂಡ; ವಸ್ತು ಸರಿದಾಡಲು ಅನುಕೂಲಿಸುವ ಗಾಡಿ, ತೋಡು, ದಂಡ ಮೊದಲಾದವು.
  20. ಜಾರುರುಳೆ; ಭಾರ ವಸ್ತುಗಳನ್ನು ಸಾಗಿಸಲು ಉಪಯೋಗಿಸುವ ಉರುಳೆ; ಜಾರುಗೊರಡು.
  21. ಕಿರಿಯಗಲದ ಉದ್ದನೆ ಬಟ್ಟೆ; ಮೇಜು ಮೊದಲಾದವುಗಳ ಮೇಲೆ ಹಾಕುವ ಉದ್ದವಾದ ಕಡಮೆಯಗಲದ ಅಲಂಕಾರದ ಬಟ್ಟೆ.
ಪದಗುಚ್ಛ

do a runner (ಅಶಿಷ್ಟ) ಕಂಬಿ ಕೀಳು; ಬೇಗ ಓಡಿ ಹೋಗು; ಕಾಲಿಗೆ ಬುದ್ಧಿಹೇಳು.